ಪಟ್ಟೂರಿನಲ್ಲಿ ಕಾಡಾನೆ ದಾಳಿ- ಕೃಷಿ ನಾಶ January 12, 2024 0 FacebookTwitterWhatsApp ಪಟ್ರಮೆ: ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಪಟ್ಟೂರು ಸಮೀಪ ಜ.11ರ ರಾತ್ರಿ ಆನೆ ದಾಳಿ ಮಾಡಿದೆ. ಇಲ್ಲಿನ ಕೊಡೆಂಚಡ್ಕ ನಿವಾಸಿ ಕಿರಣ್ ಬಲ್ಯಾಯ ಇವರ ತೋಟಕ್ಕೆ ನುಗ್ಗಿದ ಕಾಡಾನೆ ತೋಟದಲ್ಲಿದ್ದ ತೆಂಗಿನ ಮರ, ಅಡಿಕೆ ಮರ, ಹಾಗೂ ಅಪಾರ ಪ್ರಮಾಣದ ಬಾಳೆ ಕೃಷಿಯನ್ನು ಹಾನಿ ಮಾಡಿದೆ.