ದಿಡುಪೆಯ ಪ್ರಶಾಂತ್ ಗೆ ಡಾಕ್ಟರೇಟ್ ಪದವಿ

0

ದಿಡುಪೆ: ಕನ್ನಡ ವಿಶ್ವವಿದ್ಯಾಲಯ ಹಂಪಿ ಇಲ್ಲಿನ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ವಿದ್ಯಾರ್ಥಿಯಾದ ಪ್ರಶಾಂತ್ ದಿಡುಪೆ ಅವರು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾದ ಡಾ.ಎ.ಸುಬ್ಬಣ್ಣ ರೈ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ತುಳು ಸಿನಿಮಾ ಮತ್ತು ದೇಸೀ ಸಂಸ್ಕೃತಿ’ ಎನ್ನುವ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ನೀಡಲಾಗಿದೆ.

ವಿಶ್ವವಿದ್ಯಾಲಯ ಧನಸಹಾಯ ಆಯೋಗ ದೆಹಲಿ ಇವರಿಂದ ಕೊಡಮಾಡುವ ಜೆಆರ್‌ಎಫ್ ಫೇಲೋಶಿಪ್‌ನಲ್ಲಿ ತನ್ನ ಪದವಿಯನ್ನು ಪೂರೈಸಿದ್ದಾರೆ.ಗ್ರಾಮೀಣ ಪ್ರದೇಶದ ಹಿನ್ನೆಲೆಯವರಾದ ಇವರು ಪ್ರಸ್ತುತ ಕ್ರೈಸ್ಟ್ ಯೂನಿವರ್ಸಿಟಿ ಬೆಂಗಳೂರು ಇಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.

LEAVE A REPLY

Please enter your comment!
Please enter your name here