ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ ಪದವಿಪೂರ್ವ ವಿಭಾಗದ ವಿದ್ಯಾರ್ಥಿಗಳಿಗೆ ರಾಷ್ಟ್ರ ಮಟ್ಟದ ವೆಬಿನಾರ್

0

ಕಕ್ಯಪದವು: ಡಿ.26ರಂದು ವಿದ್ಯಾರ್ಥಿಗಳಿಗೆ ಷೇರು ಮಾರುಕಟ್ಟೆಗಳ ಬಗ್ಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆ ಕಕ್ಯಪದವು ಇಲ್ಲಿ ಬಂಡವಾಳ ಹೂಡಿಕೆ-ಹೂಡಿಕೆ ಜಾಗೃತಿ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಪದವಿಪೂರ್ವ ವಿಭಾಗದ ವಿದ್ಯಾರ್ಥಿಗಳಿಗೆ ರಾಷ್ಟ್ರ ಮಟ್ಟದ ವೆಬಿನಾರ್ ಅನ್ನು ಹಮ್ಮಿಕೊಳ್ಳಲಾಯಿತು.

ಪ್ರೊ.ರಾಹುಲ್ ದವನ್ ಫ್ರೊಫೆಸರ್, ಮುಂಬೈ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಹೂಡಿಕೆ ಜಾಗೃತಿ-ವಿಷಯದ ಕುರಿತು ಉಪನ್ಯಾಸ ನೀಡಿ ಬಂಡವಾಳ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವ ವಿವಿಧ ಅಂಶಗಳ ಬಗ್ಗೆ ಅರಿವು ಮೂಡಿಸಿ, ಹೂಡಿಕೆದಾರರು ಸೂಕ್ತವಾದ ಮತ್ತು ಪ್ರಾಯೋಗಿಕ ಜ್ಞಾನವನ್ನು ಪಡೆದುಕೊಂಡು, ತಿಳುವಳಿಕೆಯುಳ್ಳ ಹೂಡಿಕೆ ಮಾಡುವ ನಿರ್ಧಾರಗಳನ್ನು ತೆಗೆದುಕೊಳ್ಳುವ ಬಗೆಗೆ ವಿದ್ಯಾರ್ಥಿಗಳಿಗೆ ಜಾಗೃತಿಯನ್ನು ಮೂಡಿಸಿದರು.

ವಾಣಿಜ್ಯ ವಿಭಾಗದ ಮುಖ್ಯಸ್ಥೆ ದೀಕ್ಷಿತಾ ಮತ್ತು ಕಾಲೇಜು ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.

ಪದವಿಪೂರ್ವ ವಿಭಾಗದ ಮುಖ್ಯಸ್ಥೆ ಸೌಮ್ಯ.ಎನ್ ಸ್ವಾಗತಿಸಿ, ವಂದಿಸಿದರು.

ವಿದ್ಯಾಸಂಸ್ಥೆಯ ಸಂಯೋಜಕರಾದ ಯಶವಂತ್.ಜಿ.ನಾಯಕ್ ಅವರು ವೆಬಿನಾರ್ ಅನ್ನು ಆಯೋಜಿಸಿ, ಕಾರ್ಯಕ್ರಮವನ್ನು ನಿರ್ವಹಿಸಿ ಯಶಸ್ವಿಗೊಳಿಸಿದರು.

p>

LEAVE A REPLY

Please enter your comment!
Please enter your name here