ಅರಿಕೆಗುಡ್ಡೆ: ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಶಕ್ತಿ ಸಾನಿಧ್ಯದ ಕ್ಷೇತ್ರ ಅರಿಕೆಗುಡ್ಡೆಯ ಶ್ರೀ ವನದುರ್ಗಾ ದೇವಸ್ಥಾನ.ಅರಸಿನಮಕ್ಕಿಯಿಂದ ಸುಮಾರು ಮೂರುವರೆ ಕಿ.ಮೀ ದೂರದ ಹಸಿರುಗಿರಿಯಲ್ಲಿ ಈ ಪುಣ್ಯ ಕ್ಷೇತ್ರ ಇದ್ದು ಕಾಲಕ್ರಮೇಣ ಸಂಪೂರ್ಣ ಜೀರ್ಣಾವಸ್ಥೆಗೆ ತಲುಪಿದ್ದ ಈ ದೇವಾಲಯ ಇದೀಗ ಗ್ರಾಮದ ಭಕ್ತರ ಸಂಕಲ್ಪದಂತೆ ನವೀಕರಣಗೂಳುತ್ತಿದ್ದು., ಇನ್ನೇನು ಅಲ್ಪಸ್ವಲ್ಪ ಕೆಲಸ ಮಾತ್ರ ಬಾಕಿ ಉಳಿದಿದ್ದು ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆಯನ್ನು ಡಿ.24 ರಂದು ದೇವಳದ ಆವರಣದಲ್ಲಿ ನಡೆಸಲಾಯಿತು.
ಸಭೆಯಲ್ಲಿ ಗ್ರಾಮಸ್ಥರೆಲ್ಲ ಭಾಗಿಯಾಗಿ ನಿಗದಿಪಡಿಸಿರುವ ಜವಾಬ್ಧಾರಿಯನ್ನು ನಿಭಾಯಿಸುವ ಕುರಿತು ಚರ್ಚಿಸಿದರು.10 ರಿಂದ 15 ಸಾವಿರ ಜನ ಸೇರುವ ನಿರೀಕ್ಷೆ ಇದ್ದು ವ್ಯವಸ್ಥೆಯಲ್ಲಿ ಎಳ್ಳಷ್ಟೂ ಲೋಪ ಬರದಂತೆ ನಿಭಾಯಿಸುವುದು ತುಂಬಾ ಮುಖ್ಯ.ಎಲ್ಲಾ ಗ್ರಾಮಸ್ಥರು ಮತ್ತು ನೆರೆಹೊರೆಯ ಗ್ರಾಮಸ್ಥರು ನಮ್ಮ ಜೊತೆ ಕೈ ಜೋಡಿಸಿ ಕೆಲಸ ಮಾಡಲಿದ್ದಾರೆ ಎಂದು ಬ್ರಹ್ಮಕಲಶೋತ್ಸವದ ಸಮಿತಿಯ ಅಧ್ಯಕ್ಷ ರಂಗ ದಾಮ್ಲೆ ಸುದ್ದಿ ಬಿಡುಗಡೆ ಪತ್ರಿಕೆಗೆ ತಿಳಿಸಿದರು.
ಸಭೆಯಲ್ಲಿ ದೇವಳದ ಆಡಳಿತ ಮಂಡಳಿ ಅಧ್ಯಕ್ಷರಾದ ಪದ್ಮಯ ಬಾರಿಗ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಪಿಳಿಕಬೆ, ಮುರಳೀಧರ ಶೆಟ್ಟಿಗಾರ್, ಕೇಶವ ರಾವ್ ನೆಕ್ಕಿಲು, ಸುಧೀರ್ ಕುಮಾರ್ ಎಂಎಸ್, ಜಯರಾಂ ನೆಲ್ಲಿತ್ತಾಯಾ, ವಾಮನ ತಾಮನ್ ಕರ್, ರಾಜಗೋಪಾಲ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.