ಧರ್ಮಸ್ಥಳ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರೈತರ ದಿನಾಚರಣೆ

0

ಧರ್ಮಸ್ಥಳ: ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ರೈತರ ದಿನಾಚರಣೆಯನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.ಇದೀಗ ಪ್ರಗತಿಪರ ಉದಯೋನ್ಮುಖ ಕೃಷಿಕರಾಗಿ ಬೆಳೆಯುತ್ತಿರುವ ಸುಧೀಂದ್ರ ರಾವ್ ಬೂಡುಜಾಲು ಇವರು ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದು ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಹಲವು ವರ್ಷ ದುಡಿದು ತನ್ನ ಹುಟ್ಟೂರಿನಲ್ಲಿ ತಂದೆಯ ಕೃಷಿ ಚಟುವಟಿಕೆಗಳನ್ನು ಉತ್ತೇಜಿಸಲು, ಹೊಸ ತಾಂತ್ರಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡು ಹೆಚ್ಚು ಇಳುವರಿ ಪಡೆದು ಯಶಸ್ವಿಯಾಗಿ ಬೆಳೆದು ಕೃಷಿಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿದ ಅವರ ಅನುಭವವನ್ನು ವಿದ್ಯಾರ್ಥಿಗಳಿಗೆ ಹೇಳಿದರು.ಕೃಷಿಕರ ವೈಜ್ಞಾನಿಕ ಜ್ಞಾನ, ತಂತ್ರಜ್ಞಾನದ ಬಳಕೆ, ಡಾಟ ಸಂಗ್ರಹ ಮೊದಲಾದವುಗಳ ಬಗ್ಗೆ ಅರ್ಥಪೂರ್ಣವಾಗಿ ತಿಳಿಸಿದರು.ನಮಗೆ ಹಿರಿಯರಿಂದ ಬಳುವಳಿಯಾಗಿ ಬಂದಿರುವ ನಮ್ಮ ಮಣ್ಣಿಗೆ ಹೆಚ್ಚು ಸಾವಯವ ಗೊಬ್ಬರವನ್ನು ಬಳಸಿ ಭೂಮಿಯ ಫಲವತ್ತತೆಯನ್ನು ವರ್ಧಿಸಿ ನಮ್ಮ ಮುಂದಿನ ಪೀಳಿಗೆಗೆ ಉಳಿಸಲು ಮನವಿ ಮಾಡಿದರು.ಯಾವುದೇ ಕೆಲಸದಲ್ಲಿ ಮೇಲೂ-ಕೀಳೂ ಎಂಬ ಭೇಧವಿಲ್ಲ ಎಲ್ಲವೂ ನಮ್ಮ ಶ್ರಮ ಹಾಗೂ ವೈಜ್ಞಾನಿಕ ತಿಳುವಳಿಕೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ತಿಳಿ ಹೇಳಿದರು.ಅವರು ಮುಕ್ತವಾಗಿ ಮಕ್ಕಳೊಡನೆ ಸಂವಾದ ನಡೆಸಿದರು.

ಕಾರ್ಯಕ್ರಮವನ್ನು ಪ್ರಾರ್ಥನೆಯಿಂದ ಆರಂಭಿಸಲಾಯಿತು. ಕುಮಾರಿ ಆನ್ಮಿಯ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಕುಮಾರಿ ಶ್ರಾವ್ಯ ಸ್ವಾಗತಿಸಿ, ಕುಮಾರಿ ಯಶ್ಮ ಧನ್ಯವಾದವನ್ನು ನೀಡಿದರು.ಶಾಲಾ ಮುಖ್ಯೋಪಾಧ್ಯಾಯನಿ ಪರಿಮಳ ಎಂ.ವಿ ಅವರ ಮಾರ್ಗದರ್ಶನದಲ್ಲಿ ಮೂಡಿಬಂದ ಈ ಕಾರ್ಯಕ್ರಮಕ್ಕೆ ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಸಾಕ್ಷಿಗಳಾದರು.

LEAVE A REPLY

Please enter your comment!
Please enter your name here