ಉಜಿರೆ: ಅನುಗ್ರಹ ವಿವಿದ್ದೋದ್ದೇಶ ಸಹಕಾರಿ ಸಂಘದಲ್ಲಿ ಕ್ರಿಸ್ಮಸ್ ಆಚರಣೆ

0

ಉಜಿರೆ: ಅನುಗ್ರಹ ವಿವಿದ್ದೋದ್ದೇಶ ಸಹಕಾರಿ ಸಂಘದಲ್ಲಿ ಡಿ.21ರಂದು ಉಜಿರೆ ಇದರ ಪ್ರಧಾನ ಕಚೇರಿಯಲ್ಲಿ ಕ್ರಿಸ್ಮಸ್ ಸೆಲೆಬ್ರೇಶನ್ ಅನ್ನು ಸಂಘದಲ್ಲಿ ಆಚರಿಸಲಾಯಿತು.

ಸಂಘದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ದೀಪ ಬೆಳಗಿಸುವ ಮುಖಾಂತರ ಆಚರಣೆಗೆ ಚಾಲನೆ ಇತ್ತರು.

ಕ್ರಿಸ್ಮಸ್ ಆಚರಣೆಯಲ್ಲಿ ನಿರ್ದೇಶಕರಿಗೆ ವಿವಿಧ ಆಟೊಟ ಸ್ಪರ್ಧೆಗಳನ್ನು ಸಂಘದ ಸಿಬ್ಬಂದಿಗಳು ಏರ್ಪಡಿಸಿದ್ದರು.

ಸಭೆಯಲ್ಲಿ ಸಂಘದ ಅಧ್ಯಕ್ಷರು ಕ್ರಿಸ್ಮಸ್ ಸಂದೇಶವನ್ನು ಸಾರಿದರು.ಸಂಘದ ಸಿಬ್ಬಂದಿಗಳು ಕ್ರಿಸ್ಮಸ್ ಕ್ಯಾರಲ್ಸನ್ನು ಗಾಯನ ಮಾಡಿದರು.ಸಂಘದ ಅಧ್ಯಕ್ಷರು ಎಲ್ಲಾ ನಿರ್ದೇಶಕರಿಗೆ ಮತ್ತು ಸಿಬ್ಬಂದಿಗಳಿಗೆ ಕ್ರಿಸ್ಮಸ್ ಗಿಫ್ಟನ್ನು ವಿತರಿಸಿದರು. ಸಂಘದ ಸಿಬ್ಬಂದಿ ರಿಶೆಲ್ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here