ಶಿಶಿಲ: ಸ.ಹಿ.ಪ್ರಾ.ಶಾಲೆಯಲ್ಲಿ ಮಕ್ಕಳ ಗ್ರಾಮಸಭೆ

0

ಶಿಶಿಲ ಸ.ಹಿ.ಪ್ರಾ.ಶಾಲೆಯಲ್ಲಿ ಡಿ.20ರಂದು ಮಕ್ಕಳ ಗ್ರಾಮಸಭೆ ನಡೆಯಿತು.

ಅಧ್ಯಕ್ಷತೆಯನ್ನು ಸ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿ ನಾಯಕ ಆಕರ್ಷ ವಹಿಸಿದ್ದರು.

ಗ್ರಾ.ಪಂ.ಅಧ್ಯಕ್ಷ ಸುಧಿನ್ ಡಿ., ಉಪಾಧ್ಯಕ್ಷ ಯಶೋಧರ ಕೆ.ವಿ., ಸದಸ್ಯರಾದ ಲಲಿತಾ, ಚೆನ್ನಕ್ಕ, ಪಂ.ಅಭಿವೃದ್ಧಿ ಅಧಿಕಾರಿ ದಿನೇಶ್, ಕೊಳಕ್ಕೆಬೈಲು ಮತ್ತು ಶಿಶಿಲ ಶಾಲೆಯ ಮುಖ್ಯಗುರುಗಳು, ಸ್ಥಳೀಯ ಆರೋಗ್ಯ ಸಹಾಯಕಿ ಪವಿತ್ರ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ತಮ್ಮ ಹಕ್ಕುಗಳ ಮಾಹಿತಿಯನ್ನು ನೀಡಿದರು.

ನಂತರ ವಿದ್ಯಾರ್ಥಿಗಳು ಅನೇಕ ಬೇಡಿಕೆಗಳನ್ನು ಸಲ್ಲಿಸಿದರು. ಪಂ.ಅ.ಅಧಿಕಾರಿ ದಿನೇಶ್ ಸ್ವಾಗತಿಸಿದರು. ಪಂಚಾಯತ್‌ ಸಿಬ್ಬಂದಿ ಸುಂದರ ವಂದಿಸಿದರು.

LEAVE A REPLY

Please enter your comment!
Please enter your name here