ಉಜಿರೆ: ಶ್ರೀ ಧ.ಮಂ.ಅ.ಹಿ.ಪ್ರಾಥಮಿಕ ಶಾಲೆಯಲ್ಲಿ ಕುಣಿತ ಭಜನೆ ಸ್ಪರ್ಧೆ

0

ಉಜಿರೆ: ಇಲ್ಲಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ.14ರಂದು ಶಾಲಾ ವಾರ್ಷಿಕೋತ್ಸವದ ಅಂಗವಾಗಿ 6 ಮತ್ತು 7ನೇ ತರಗತಿ ಮಕ್ಕಳಿಗೆ ಕುಣಿತ ಭಜನೆ ಸ್ಪರ್ಧೆ ಆಯೋಜಿಸಲಾಗಿತ್ತು.ಕಾರ್ಯಕ್ರಮವನ್ನು ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಬಿ.ಸೋಮಶೇಖರ ಶೆಟ್ಟಿ ಉದ್ಘಾಟಿಸಿದರು.

ತಮ್ಮ ಉದ್ಘಾಟನ ನುಡಿಯಲ್ಲಿ ಅವರು ಭಜನೆಯು ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿ ಅನಗತ್ಯ ಹಾಗೂ ಅನುಚಿತವಾದ ವಿಷಯಗಳ ಬಗ್ಗೆ ಯೋಚಿಸುವುದರಿಂದ ದೂರ ಮಾಡುತ್ತದೆ. ವಿದ್ಯಾರ್ಥಿಗಳನ್ನು ಕ್ರಿಯಾತ್ಮಕವಾಗಿರಿಸುವಂತಹ ಇಂತಹ ಭಜನಾ ಸ್ಪರ್ಧೆಗಳನ್ನು ಆಯೋಜಿಸಿರುವುದು ಶ್ಲಾಘನೀಯ” ಎಂದರು.

ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು.ಶಾಲಾ ಮುಖ್ಯ ಶಿಕ್ಷಕ ಬಾಲಕೃಷ್ಣ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಹರ್ಷಕುಮಾರ್ ಕೆ.ಎನ್. ನಿವೃತ್ತ ಮುಖ್ಯ ಉಪಧ್ಯಾಯರು, ಜಯಭಾರತಿ ನಿವೃತ್ತ ಮುಖ್ಯೋಪಾಧ್ಯಾಯಿನಿ, ವಿಜಯಲಕ್ಷ್ಮೀ ನಿವೃತ್ತ ಸಹಶಿಕ್ಷಕಿ, ರವಿರಾಜ್ ಒಡಿಯೂರು ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಹಿನ್ನೆಲೆ ಸಂಗೀತದೊಂದಿಗೆ ಜರುಗಿದ ಈ ಸ್ಪರ್ಧೆಯಲ್ಲಿ ಆರು ಮತ್ತು ಏಳನೇ ತರಗತಿಯ ತಲಾ 4 ತಂಡಗಳು ಭಾಗವಹಿಸಿ ತೀರ್ಪುಗಾರರ ಪ್ರಶಂಸೆಗೆ ಭಾಜನರಾದರು.ಹಿನ್ನೆಲೆ ಸಂಗೀತದಲ್ಲಿ ಮುಖ್ಯವಾಗಿ ಹಾರ್ಮೋನಿಯಂ ವಾದಕರರಾಗಿ ರವಿರಾಜ್ ಒಡಿಯೂರು, ತಬಲ ವಾದಕರಾಗಿ ಸಂಸ್ಥೆಯ ಹಿರಿಯ ವಿದ್ಯಾರ್ಥಿ ವಿಶಾಕ್ ಮತ್ತು 7ನೇ ತರಗತಿಯ ವಿದ್ಯಾರ್ಥಿ ನಿಧೀಶ್ ಸಹಕರಿಸಿದರು.

ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲದೆ ಶಾಲಾ ಶಿಕ್ಷಕರು ಸಹ 2 ತಂಡಗಳಾಗಿ ನಡೆಸಿಕೊಟ್ಟ ಭಜನೆ ಕಾರ್ಯಕ್ರಮ ವಿನೂತನವಾಗಿತ್ತು.

ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನು ಗಿರೀಶ್ ಸ್ವಾಗತಿಸಿದರು.ಅನುಷಾ ಧನ್ಯವಾದವಿತ್ತರು.ಕೂಸಪ್ಪಗೌಡ ಕಾರ್ಯಕ್ರಮವನ್ನು ನಿರೂಪಿಸಿದರು.

p>

LEAVE A REPLY

Please enter your comment!
Please enter your name here