ಕೊಕ್ಕಡ: ಡಿ.17 ರಂದು ಕೋರಿ ಜಾತ್ರೆಯ ಸಂದರ್ಭದಲ್ಲಿ ಗದ್ದೆಗೆ ಕೋಣಗಳನ್ನು ಇಳಿಸುವ ಸಂಪ್ರದಾಯ ಹಿಂದಿನಿಂದಲೂ ನಡೆಯುತ್ತಾ ಬಂದಿದೆ.ಈ ಬಾರಿಯ ಕೋರಿ ಜಾತ್ರೆಯ ಗದ್ದೆಗೆ ಕಳೆಂಜದ ಹರಿಪ್ರಸಾದ್ ಶೆಟ್ಟಿಯವರ ಕಂಬಳದ ಕೋಣಗಳನ್ನು ಸಂಪ್ರದಾಯದಂತೆ ಮೆರವಣಿಗೆಯಲ್ಲಿ ತಂದು ಗದ್ದೆಗೆ ಇಳಿಸಲಾಯಿತು.ಈಗಿನ ಪರಿಸ್ಥಿತಿಯಲ್ಲಿ ಕೋಣಗಳನ್ನು ಸಾಕುವುದು ಬಹಳ ಕಷ್ಟದ ಕೆಲಸ.ಇಂತಹ ಸಂಧರ್ಭದಲ್ಲಿ ಕೋಣಗಳ ಮಾಲಕರಾದ ಹರಿಪ್ರಸಾದ್ ರೈ ರವರಿಗೆ ಕೊಕ್ಕಡದ ಗುತ್ತಿನ ಮನೆಯ ರತ್ನಾಕರ ಭಂಡಾರಿಯವರ ಮನೆಯ ವಠಾರದಲ್ಲಿ ಕಳೆಂಜ ಗ್ರಾಮಸ್ಥರ ಪರವಾಗಿ ಶಾಲು ಹೊದಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಅಧ್ಯಕ್ಷ ಕೆ.ಶ್ರೀಧರ್ ರಾವ್ ಮತ್ತು ಇತರ ಊರ ಗಣ್ಯರು ಉಪಸ್ಥಿತರಿದ್ದರು.
p>