ಬೆಳ್ತಂಗಡಿ: ವಿಪರೀತ ಶಬ್ಧ ಮಾಲಿನ್ಯ ಮಾಡುತ್ತಿದ್ದ ಬೈಕ್ ಮತ್ತು ಸ್ಕೂಟರ್‌ಗಳ ಶಬ್ಧ ಶಾಮಕ ( ಸೈಲೆನ್ಸರ)ನ್ನು ಬೆಳ್ತಂಗಡಿ ಸಂಚಾರ ಪೊಲೀಸರು ಡಿ.15ರಂದು ಠಾಣೆಯ ಮುಂಭಾಗದಲ್ಲಿ ರೋಲರ್ ಮೂಲಕ ನಾಶ ಮಾಡಲಾಯಿತು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಚಾರ ಠಾಣೆಯ ಎಸ್.ಐ ಅರ್ಜುನ್ ಅವರು, ಮೂರು ತಿಂಗಳಿಂದ ವಿಪರೀತ ಶಬ್ಧ ಮಾಲಿನ್ಯ ಮಾಡುತ್ತಿದ್ದ ಬೈಕ್ ಮತ್ತು ಸ್ಕೂಟರ್‌ಗಳ ಸುಮಾರು 20 ಸೈಲೆನ್ಸರನ್ನು ವಶಪಡಿಸಿಕೊಂಡು ದಂಡ ವಿಧಿಸಿ ನಾಶಪಡಿಸಲಾಗಿದೆ.
ಸವಾರರು ಬೈಕ್ ಗಳಿಗೆ ವಿಪರೀತ ಶಬ್ಧ ಶಾಮಕಗಳನ್ನು ಅವಳಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದರು.
p>