ಮಂಗಳೂರಿನಲ್ಲಿ ನಡೆದ ಕಶ್ಚಿ ಇಂಟರ್ನ್ಯಾಷನಲ್ ಓಪನ್ ಫಿಡೆ ರೇಟೆಡ್ ಪಂದ್ಯಾಟದಲ್ಲಿ- ಕೊಕ್ಕಡದ ಸೈಂ.ಫ್ರಾ.ಇಂ.ಮೀ ಶಾಲಾ ವಿದ್ಯಾರ್ಥಿ ಸಮರ್ಥ್ ಭಟ್ ತೃತಿಯ

0

ಕೊಕ್ಕಡ: ಡಿ.9 ಮತ್ತು 10ರಂದು ಮಂಗಳೂರಿನಲ್ಲಿ ನಡೆದ ಕಶ್ಚಿ ಇಂಟರ್ನ್ಯಾಷನಲ್ ಓಪನ್ ಫಿಡೆ ರೇಟೆಡ್ ಪಂದ್ಯಾಟ – 2023ರ ಬೆಸ್ಟ್ ಅನ್‌ರೇಟೆಡ್ ವಿಭಾಗದಲ್ಲಿ ಕೊಕ್ಕಡದ ಸೈಂಟ್ ಫ್ರಾನ್ಸಿಸ್ ಇಂಗ್ಲಿಷ್ ಮೀಡಿಯಂ ಶಾಲೆಯ 5ನೇ ತರಗತಿಯ ವಿದ್ಯಾರ್ಥಿ ಸಮರ್ಥ್ ಭಟ್ ತೃತಿಯ ಸ್ಥಾನವನ್ನು ಪಡೆದಿದ್ದಾರೆ.

ಟ್ರೋಫಿ ಮತ್ತು ರೂ 15000 ನಗದು ಬಹುಮಾನ ಪಡೆದುಕೊಂಡಿರುವ ಇವರು ಪುತ್ತೂರಿನ ಜೀನಿಯಸ್ ಚೆಸ್ ಅಕಾಡೆಮಿಯ ಸತ್ಯ ಪ್ರಸಾದ್ ಕೋಟೆಯವರ ತರಬೇತಿಯಲ್ಲಿ ಮೂಡಿಬಂದಿದ್ದಾರೆ.

ಇವರು ಕೊಕ್ಕಡದ ಡಾ.ಗಣೇಶ್ ಪ್ರಸಾದ್‌ ಮತ್ತು ಜ್ಯೋತಿಯವರ ಪುತ್ರ.

LEAVE A REPLY

Please enter your comment!
Please enter your name here