ದಯಾ ವಿಶೇಷ ಶಾಲೆಯಲ್ಲಿ ಏಡ್ಸ್‌ ಜನಜಾಗೃತಿ ಕಾರ್ಯಕ್ರಮ

0

ಲಾಯಿಲ: ದಯಾ ವಿಶೇಷ ಶಾಲೆಯಲ್ಲಿ ಏಡ್ಸ್‌ ಜನಜಾಗೃತಿ ಕಾರ್ಯಕ್ರಮವನ್ನು ಡಿಸೆಂಬರ್‌ 1ರಂದು ನೆಡೆಸಲಾಯಿತು.ಈ ಸಂದರ್ಭದಲ್ಲಿ ನಿರ್ದೇಶಕ ವಂ.ಫಾ.ವಿನೊದ್‌ ಮಸ್ಕರೇನ್ಹಸ್ ರವರು ಹಾಗೂ ಮುಖ್ಯ ಶಿಕ್ಷಕಿಯಾದ ದಿವ್ಯಾ ಟಿ.ವಿ ಮತ್ತು ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಏಡ್ಸ್‌ ರೊಗದ ಕುರಿತು ತಪ್ಪು ತಿಳುವಳಿಕೆ ಸಲ್ಲದು, ಆದರೆ ಮಾರಕ ರೋಗದ ಕುರಿತು ಜಾಗೃತಿ ಮೂಡಿಸುವುದು ಅಗತ್ಯ ಎಂದು ನಿರ್ಧೇಶಕ ವಂ.ಫಾ. ವಿನೊದ್‌ ಮಸ್ಕರೇನ್ಹಸ್ ರವರು ಹೇಳಿದರು.

ಈ ರೋಗವು ಯಾವ ರೀತಿಯಾಗಿ ಹರಡುತ್ತದೆ, ಹಾಗೂ ಏಡ್ಸ್‌ ರೋಗ ಬರದಂತೆ ಹೇಗೆ ತಡೆಗಟ್ಟಬಹುದು ಹಾಗೆಯೇ ಯಾವುದೇಲ್ಲಾ ರೀತಿಯಲ್ಲಿ ಏಡ್ಸ್‌ ರೋಗವು ಹರಡುವುದಿಲ್ಲ ಎಂದು ಶಾಲೆಯ ಮಕ್ಕಳು ಫಲಕಗಳನ್ನು ಹಿಡಿಯುತ್ತಾ ಏಡ್ಸ್‌ ರೋಗದ ಕುರಿತು ಜನಜಾಗೃತಿ ಮೂಡಿಸಿದರು.

LEAVE A REPLY

Please enter your comment!
Please enter your name here