ಕಾಶಿಪಟ್ಣ ಗ್ರಾಮ ಪಂಚಾಯತ್ ಕಛೇರಿಯಲ್ಲಿ ಮಹಿಳಾ ಗ್ರಾಮ ಸಭೆ

0

ಕಾಶಿಪಟ್ಣ :  ಕಾಶಿಪಟ್ಣ ಗ್ರಾಮ ಪಂಚಾಯತ್ ಕಛೇರಿ ಸಭಾಂಗಣದಲ್ಲಿ  ಅಧ್ಯಕ್ಷ ಸತೀಶ್.ಕೆ. ಬಂಗೇರ ಇವರ ಅಧ್ಯಕ್ಷತೆಯಲ್ಲಿ  ಮಹಿಳಾ ಗ್ರಾಮ ಸಭೆಯು ಸಭೆಯು ಡಿ.1ರಂದು ಜರಗಿತು. 

ಆರ್ಥಿಕ ಸಾಕ್ಷರತಾ ವಿಭಾಗದ ಉಷಾ  ಇವರು ಬ್ಯಾಂಕಿಂಗ್ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.ಸಮುದಾಯ ಆರೋಗ್ಯಾಧಿಕಾರಿ ಉಮಾವತಿ ಮಹಿಳೆಯರ ಆರೋಗ್ಯ , ನೈರ್ಮಲ್ಯ  ಹಾಗೂ ಪೌಷ್ಠಿಕತೆಯ ಬಗ್ಗೆ ಮಾಹಿತಿ ನೀಡಿ ತಪಾಸಣೆ ನಡೆಸಿದರು.ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಗುರುಪ್ರಸಾದ್  ಅಂಚೆ ಇಲಾಖಾ ವತಿಯಿಂದ ಸಿಗುವ ಸೇವೆಗಳ ಬಗ್ಗೆ ಇವರು ಮಾಹಿತಿ ನೀಡಿದರು.ಕೇಳದಪೇಟೆ ಶಾಖಾ ಅಂಚೆ ಪಾಲಕಿ  ಉಮಾಶ್ರೀ ಸ್ಥಳದಲ್ಲಿ ಉಳಿತಾಯ ಖಾತೆ ನೋಂದಣಿ ಮಾಡಿದರು.

ತಾಲೂಕು ಸಂಯೋಜಕರು ವಿನಿಷಾ ನರೇಗಾ ಯೋಜನೆ ತಾ.ಪಂ.ಬೆಳ್ತಂಗಡಿ ಇವರು  ನರೇಗಾ ಯೋಜನೆಯ ಮಾಹಿತಿಯನ್ನು ನೀಡಿದರು.ಗೃಹ  ಲಕ್ಷ್ಮಿ ಯೋಜನೆಯಡಿ ಹಣ ಜಮೆಯಾಗದ ಫಲಾನುಭವಿಗಳ ದಾಖಲೆಗಳನ್ನು ಮುಂದಿನ ಕ್ರಮಗಳಿಗೆ ಸಂಗ್ರಹಿಸಲಾಯಿತು.

ಪಂಚಾಯತು ಅಭಿವೃದ್ಧಿ ಅಧಿಕಾರಿ ಆಶಾಲತಾ .ಎಚ್. ಇವರು ಸ್ವಾಗತಿಸಿ, ನಿರೂಪಿಸಿ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here