


ಪುದುವೆಟ್ಟು: ಮಿಯಾರು ಶ್ರೀ ವನದುರ್ಗಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸಹಕಾರದೊಂದಿಗೆ ಕುಣಿತ ಭಜನಾ ತರಬೇತಿ ಗುರು ನಾಗೇಶ್ ಬಿ. ನೆರಿಯ ಅವರ ಮುಂದಾಳತ್ವದಲ್ಲಿ ಶ್ರೀ ವನದುರ್ಗಪರಮೇಶ್ವರಿ ಭಜನಾ ಮಂಡಳಿಯ ತರಬೇತಿ ಕಾರ್ಯಕ್ರಮ ಉದ್ಘಾಟನೆಗೊಂಡಿತು.


ಈ ಕಾರ್ಯಕ್ರಮಕ್ಕೆ ದೇವಸ್ಥಾನದ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ದೇವಸ್ಥಾನದ ಭಜನಾ ಮಂಡಳಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಮೇಲ್ವಿಚಾರಕ ರವೀಂದ್ರ ಹಾಗೂ ಸೇವಾ ಪ್ರತಿನಿಧಿ ಚೈತ್ರ ಮತ್ತು ಊರಿನ ಎಲ್ಲಾ ಸದಸ್ಯರು ಭಾಗವಹಿಸಿದರು.
ಕಾರ್ಯಕ್ರಮಕ್ಕೆ ಬಂದ ಎಲ್ಲರನ್ನು ಸಜ್ಜೀವ್ ಅವರು ಸ್ವಾಗತಿಸಿದರು. ಹಾಗೂ ಚೈತ್ರ ಧನ್ಯವಾದವಿತ್ತರು.









