ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ವತಿಯಿಂದ ವಿಶ್ವ ಏಡ್ಸ್ ದಿನಾಚರಣೆ

0

ಬೆಳ್ತಂಗಡಿ: ಡಿ.ಕೆ.ಆರ್.ಡಿ.ಎಸ್ (ರಿ), ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರ ನೇತೃತ್ವದಲ್ಲಿ ಡಿ.01ರಂದು ವಿಶ್ವ ಏಡ್ಸ್ ದಿನ ಕಾರ್ಯಕ್ರಮವನ್ನು ಸಾಂತೋಮ್ ಟವರ್ ಬೆಳ್ತಂಗಡಿ ಇಲ್ಲಿ ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಗೃಹ ರಕ್ಷಕ ದಳದ ಘಟಕಾಧಿಕಾರಿ ಜಯಾನಂದ ಆಗಮಿಸಿ, ಸಮಾಜವನ್ನು ಕಟ್ಟೋಣ ನಿಷ್ಟವಂತರಾಗಿ ಸಮಾಜದಲ್ಲಿ ಬದುಕೋಣ ಎಂದು ಶುಭ ಹಾರೈಸಿ ಪೌಷ್ಠಿಕ ಆಹಾರ ವಿತರಿಸಿದರು.

ಇನ್ನೋರ್ವ ಮುಖ್ಯ ಅತಿಥಿ ಬೆಳ್ಳಾರೆ ಡಾ.ಕೆ.ಶಿವರಾಮ ಕಾರಂತ್ ಕಾಲೇಜಿನ ಉಪನ್ಯಾಸಕಿ ರಶ್ಮಿತ ಕರ್ಕೇರ ಅವರು ಹೆಚ್.ಐ.ವಿ /ಏಡ್ಸ್ ರೋಗದ ಬಗ್ಗೆ ಜಾಗೃತರಾಗಿ ಇತರರಿಗೂ ಮಾಹಿತಿ ಹಂಚುವ ಕಾರ್ಯ ನಡೆಸುವ ಬಗ್ಗೆ ತಿಳಿಸಿದರು.ಡಿ.ಕೆ.ಆರ್.ಡಿ.ಎಸ್. ಸಂಸ್ಥೆಯ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.ಪುಷ್ಪರಾಜ್ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

2021-22 ನೆ ಸಾಲಿನ ಚಿನ್ನದ ಪದಕ ವಿಜೇತರಾದ ಜಯಾನಂದ ಗೃಹ ರಕ್ಷಕ ದಳ ಘಟಕಧಿಕಾರಿ, ತಾಲೂಕು ಪಂಚಾಯತ್ ಸoಯೋಜಕ ಬೆಳ್ತಂಗಡಿ ಇವರನ್ನು ಡಿ.ಕೆ.ಆರ್.ಡಿ.ಏಸ್ ಸಂಸ್ಥೆಯಿಂದ ಸನ್ಮಾನಿಸಲಾಯಿತು.

ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಬಿನೋಯಿ ಎ.ಜೆ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು.ನವ ಜೀವನ ಬೆಂಬಲ ಕಾರ್ಯಕ್ರಮದ ಸಂಯೋಜಕಿ ಕುಮಾರಿ ಶ್ರೇಯಾ ಇವರು ಎಲ್ಲರನ್ನು ಸ್ವಾಗತಿಸಿ, ಕಾರ್ಯಕರ್ತರಾದ ಮಾರ್ಕ್ ಡಿ’ಸೋಜ ಇವರು ವಂದಿಸಿದರು.ಕಾರ್ಯಕ್ರಮವನ್ನು ಸಂಯೋಜಕಿ ಸಿಸಿಲಿಯ ತಾವ್ರೋ ರವರು ನಿರೂಪಿಸಿದರು.ಸರಕಾರಿ ಕಾಲೇಜು ಬೆಳ್ಳಾರೆ ಹಾಗೂ ಮಂಗಳೂರಿನ ರೋಶನಿ ನಿಲಯದ ಸ್ನಾತಕೋತ್ತರ ಸಮಾಜ ಕಾರ್ಯದ ವಿಧ್ಯಾರ್ಥಿಗಳು ಹಾಗೂ ಡಿ.ಕೆ.ಆರ್.ಡಿ.ಎಸ್ ಸಿಬ್ಬಂದಿ ವರ್ಗದವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿತು.

p>

LEAVE A REPLY

Please enter your comment!
Please enter your name here