ಧರ್ಮಸ್ಥಳ ಸಂತ ಜೋಸೆಫ್ ಫೋರೆನ್ಸ್ ಚರ್ಚ್ ನ ನವೀಕೃತ ಪೂಜಾ ವೇದಿಕೆ ಆಶೀರ್ವಚನ

0

ಧರ್ಮಸ್ಥಳ : ಧರ್ಮಸ್ಥಳ ಗ್ರಾಮದ ಜೋಡುಸ್ತಾನ ಬಳಿ ಇರುವ ಸಂತ ಜೋಸೆಫರ ಫೋರೆನ್ಸ್ ಚರ್ಚ್ ನಲ್ಲಿ ನೂತನ ವಾಗಿ ನಿರ್ಮಿಸಿದ ನವೀಕೃತ ವೇದಿಕೆಯ ಆಶೀರ್ವಚನ ಕಾರ್ಯಕ್ರಮ ನ. 30ರಂದು ನಡೆಯಿತು.

ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಆಶೀರ್ವಚನ ನೆರವೇರಿಸಿದರು. ಪೀಠದ ಪ್ರಯೋಜಕರಾದ ಮಾಣಿಕೇರಿಕಲಮ್ ಕುಟುಂಬಸ್ಥರಿಗೆ ಚರ್ಚ್ ಧರ್ಮ ಗುರು ವ. ಫಾ.ರೊಕ್ಕಿ ಮೆನಚೆರಿಯವರು ಕೃತಜ್ಞತೆ ಸಲ್ಲಿಸಿದರು.

ಬೆಳ್ಳಿ ಹಬ್ಬದ ಸಂಭ್ರಮ ದಲ್ಲಿರುವ ಧರ್ಮಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವ. ಫಾ. ಜೋಸೆಫ್ ವಾಲುಕಾರನ್,ವ. ಫಾ. ಸೆಬಾಸ್ಟಿಯನ್ ಪುನ್ನತ್ತನಾಥ್, ಡಾ. ರೇಶ್ಮಿ ಸಿ. ಎಂ. ಸಿ. ಮತ್ತು ಕಮಿಟಿ ಸದಸ್ಯರು ಹಾಗೂ ಚರ್ಚ್ ನ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here