45.000 ಮೌಲ್ಯದ, ಮಾದಕ ವಸ್ತು ಎಂ ಡಿ ಎಂ ಎ ಪತ್ತೆ ಉಪ್ಪಿನಂಗಡಿ ಪೊಲೀಸರಿಂದ ಮೂವರ ಬಂಧನ.

0

ಬೆಳ್ತಂಗಡಿ: 45.000 ಮೌಲ್ಯದ, 22.4 ಮಿಲಿ ಗ್ರಾಂ ತೂಕದ ಮಾದಕ ವಸ್ತು ಎಂಡಿಎಂಎ ನ್ನು ಸಾಗಾಟ ಮಾಡುತ್ತಿದ್ದ ಉರುವಾಲು ಗ್ರಾಮದ ಸುಶ್ರುತ ಕೃಷ್ಣ.ಜೆ.ಕೆ (32) , ನೆರಿಯ ಗ್ರಾಮದ ಸೆಬಾಸ್ಟಿಯನ್ (31), ಕೇರಳ ಮೂಲದ ಇಡುಕ್ಕಿ ಜಿಲ್ಲೆಯ ಅನಿಲ್ ತೋಮಸ್ (31) ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.ಉಪ್ಪಿನಂಗಡಿ ಗ್ರಾಮದ ಮೆಕ್ಷಿಕೋ ಹೋಟೆಲ್ ಮುಂಭಾಗದ ನ. 27 ರಂದು ರಾ.ಹೆ 75ರಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾ ಸಬ್ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಗಳು ತಪಾಸಣೆಯ ನಿಮಿತ್ತ ವೆನ್ಯೂ ವಾಹನ ನಂಬ್ರ KA-21-Z-1864 ನೇ ವಾಹನವನ್ನು ನಿಲ್ಲಿಸಲು ಸೂಚಿಸಿದಾಗ ವಾಹನ ನಿಲ್ಲಿಸದೆ ಚಾಲಕ ಹಾಗೂ ವಾಹನದಲ್ಲಿದ್ದ ಇನ್ನಿಬ್ಬರು ಪರಾರಿಯಾಗಲು ಯತ್ನಿಸಿದರು. ಹಿಡಿದು ವಿಚಾರಿಸಿದಾಗ 45.000 ಮೌಲ್ಯದ, 22.4 ಮಿಲಿ ಗ್ರಾಂ ತೂಕದ ಮಾದಕ ವಸ್ತು ಎಂ ಡಿ ಎಂ ಎ ಪತ್ತೆಯಾಗಿದ್ದು, ಆರೋಪಿಗಳ ಬಳಿಯಿದ್ದ 03 ಮೊಬೈಲ್ ಪೋನ್ ಗಳು ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಕ್ಕೆ ಪಡೆದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 162/2023 ಕಲಂ: U/s-8(c) 22(b) ಎನ್.ಡಿ.ಪಿ.ಎಸ್ ಕಾಯ್ದೆ r/w 34 ipc ಯಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here