ಕಾಶಿಪಟ್ಣ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೇಳ-ಕಾಶಿಪಟ್ಟದಲ್ಲಿ ಕಾರ್ತಿಕ ದೀಪೋತ್ಸವ, ಧಾರ್ಮಿಕ ಸಭೆ, ಯಕ್ಷಗಾನ ಬಯಲಾಟ ಹಾಗೂ ಸನ್ಮಾನ ಸಮಾರಂಭ ನ.27 ರಂದು ಜರಗಿತು.
ಇದರ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ.ಹರಿನಾರಾಯಣ ಅಸ್ರಣ್ಣ ಆಶೀರ್ವಚನ ನೀಡಿದರು.
ದೇವಸ್ಥಾನದ ಪ್ರಧಾನ ಅರ್ಚಕ ಕೆ.ಅನಂತ ಅಸ್ರಣ್ಣ ಅಧ್ಯಕ್ಷತೆ ವಹಿಸಿದ್ದರು.
ಕಾಶಿಪಟ್ಣ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಬೆಜೆಪಿ ಜಿಲ್ಲಾ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ವಿಕ್ರಮ್ ಕೇಳ ಅರಮನೆ, ನಾರಾಯಣ ಭಟ್ ಕೇಳ ಮಾಗಣೆ ಗುತ್ತು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ವೇ.ಮೂ.ಚಂದ್ರಶೇಖರ ಅಸ್ರಣ್ಣ, ವಿಷ್ಣು ಶರ್ಮ ವಾಟೆ ಪಡ್ಪು, ಎನ್.ಸೀತಾರಾಮ ರೈ, ದೇವು ಪರವ ಇವರನ್ನು ಸನ್ಮಾನಿಸಲಾಯಿತು.ಶಂಕರ್ ಭಟ್ ಬಾಲ್ಯ ಸ್ವಾಗತಿಸಿ, ಉಪನ್ಯಾಸಕ ವಾದಿರಾಜ ಕಲ್ಲೂರಾಯ ನಿರೂಪಿಸಿದರು.ವಿಶು ಕುಮಾರ್ ವಂದಿಸಿದರು.
ರಾತ್ರಿ ಜಿಲ್ಲೆಯ ಪ್ರಸಿದ್ದ ಕಲಾವಿದರಿಂದ ಯಕ್ಷಗಾನ ಬಯಲಾಟ “ಅಭಿಮನ್ಯು ಕಾಳಗ-ಗಿರಿಜಾ ಕಲ್ಯಾಣ” ನಡೆಯಿತು.
ಶ್ರೀ ಪಂಚಲಿಂಗೇಶ್ವರ ಯಕ್ಷಗಾನ ಮಂಡಳಿಯ ಪದಾಧಿಕಾರಿಗಳು, ಕೇಳ-ಕಾಶಿಪಟ್ಟ ಹಾಗೂ ಕಾಶಿಪಟ್ಟ, ಪೆರಾಡಿ, ಮರೋಡಿ, ಸಾವ್ಯ ಗ್ರಾಮಸ್ಥರು ಹಾಜರಿದ್ದರು