ತೆಕ್ಕಾರು : ದೇವರ ವಿಗ್ರಹ, ಪಾಣಿಪೀಠ ಸಿಕ್ಕ ಜಾಗದಲ್ಲಿ ನಾಗ ಸಾನಿಧ್ಯದ ಸುಳಿವು

0

ಬೆಳ್ತಂಗಡಿ: ತಾಲೂಕಿನ ತೆಕ್ಕಾರಿನಲ್ಲಿ ಅನ್ಯಮತೀಯ ವ್ಯಕ್ತಿ ಅತಿಕ್ರಮಿಸಿದ್ದ ಜಾಗದಲ್ಲಿ ದೇವಸ್ಥಾನ ಪತ್ತೆಯಾಗಿತ್ತು.ಅದರ ಬೆನ್ನಲ್ಲೇ ಗ್ರಾಮಸ್ಥರು ಅದೇ ಜಾಗದಲ್ಲಿಯೇ ಪ್ರಶ್ನಾ ಚಿಂತನೆ ಇಟ್ಟಿದ್ದಾರೆ.ಪ್ರಶ್ನಾ ಚಿಂತನೆಯಲ್ಲಿ ನಾಗ ಸಾನಿಧ್ಯದ ಸುಳಿವು ಗೋಚರವಾಗಿದೆ.

ದೈವಜ್ಞ ಮಾಡಾವು ವೆಂಕಟ್ರಮಣ್ ಭಟ್ ನೇತೃತ್ವದ ಪ್ರಶ್ನಾ ಚಿಂತನೆಯಲ್ಲಿ ದೇವಸ್ಥಾನ ಪತ್ತೆಯಾದ ಜಾಗದ ಹತ್ತಿರದಲ್ಲೇ ನಾಗಬನ ಇರುವ ಸುಳಿವು ಸಿಕ್ಕಿದೆ. ಹಿಂದಿನ ಪ್ರಶ್ನಾ ಚಿಂತನೆ ವೇಳೆ ಉತ್ಪನನ ನಡೆಸಿದ ಮೇಲೆ ಅನ್ಯಮತೀಯ ವ್ಯಕ್ತಿ ಅತಿಕ್ರಮಿಸಿದ್ದ ಸರ್ಕಾರಿ ಜಾಗದ 15 ಅಡಿ ಆಳದಲ್ಲಿ ದೇವರ ವಿಗ್ರಹ, ಪಾಣಿಪೀಠ, ಪಂಚಾಂಗದ ಕಲ್ಲುಗಳು ಪತ್ತೆಯಾಗಿತ್ತು.

ಹತ್ತಾರು ವರ್ಷಗಳ ಹಿಂದೆಯೇ ಗ್ರಾಮದಲ್ಲಿ ದೇವಸ್ಥಾನ ಇರುವ ಬಗ್ಗೆ ಪ್ರಶ್ನಾಚಿಂತನೆ ವೇಳೆ ಬಯಲಾಗಿತ್ತು. ಸದ್ಯ ದೇವಸ್ಥಾನ ಪತ್ತೆ ಬೆನ್ನಲ್ಲೇ ನಾಗಾರಾಧನೆ ಬಗ್ಗೆಯೂ ಸ್ಫೋಟಕ ಸತ್ಯ ಬಹಿರಂಗವಾಗಿದೆ.

p>

LEAVE A REPLY

Please enter your comment!
Please enter your name here