ಕಕ್ಯಪದವು: ಎಲ್ ಸಿ ಆರ್ ವಿದ್ಯಾ ಸಂಸ್ಥೆಯಲ್ಲಿ ಪೂರ್ವ ಪ್ರಾಥಮಿಕ ವಿಭಾಗದ ಎಲ್.ಕೆ.ಜಿ ಮತ್ತು ಯು.ಕೆ.ಜಿ ವಿದ್ಯಾರ್ಥಿಗಳಿಗೆ ಫ್ರೂಟ್ಸ್ ಅಂಡ್ ವೆಜಿಟೇಬಲ್ಸ್ ಡೇಯನ್ನು ನ.22ರಂದು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರು ಜೋಸ್ಟನ್ ಲೋಬೋ, ಸಂಯೋಜಕರು ಯಶವಂತ ಜಿ.ನಾಯಕ್, ಮುಖ್ಯ ಶಿಕ್ಷಕಿ ವಿಜಯಾ.ಕೆ ಇವರು ಉಪಸ್ಥಿತರಿದ್ದರು.ಮಕ್ಕಳಿಗೆ ಛದ್ಮವೇಷ , ಭಾಷಣ , ಚಿತ್ರಕಲೆ ಸ್ಪರ್ಧೆಗಳನ್ನು ನಡೆಸಲಾಯಿತು.ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಂಸ್ಥೆಯ ಸಹಾಯಕಿಯರನ್ನು ಅಭಿನಂದಿಸಲಾಯಿತು.ಕಾರ್ಯಕ್ರಮದ ಆಯೋಜನೆಯಲ್ಲಿ ಶಿಕ್ಷಕರಾದ ಶೈಲಜಾ, ಧನ್ಯಶ್ರಿ, ದಿವ್ಯ, ಅಶ್ವಿತಾ ಇವರು ಸಹಕರಿಸಿದ್ದು ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಪ್ರಿಯತ ನಿರೂಪಿಸಿ, ಸಹಶಿಕ್ಷಕಿ ಭವ್ಯ ಸ್ವಾಗತಿಸಿ, ಸಹ ಶಿಕ್ಷಕಿ ಕು| ರೋಶಲ್ ಸವಿತಾ ಕೊರ್ಡೆರೋ ವಂದಿಸಿದರು.
p>