ಬೆಳ್ತಂಗಡಿ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ಸಾಹಿತಿಗಳ ಪರಿಚಯ ಕಾರ್ಯಕ್ರಮ

0

ಬೆಳ್ತಂಗಡಿ: ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿ ಇಲ್ಲಿ ಕಲಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಸಾಹಿತಿಗಳ ಪರಿಚಯ ಕಾರ್ಯಕ್ರಮವು ನ.21ರಂದು ನಡೆಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಊರಿನ ಹೆಮ್ಮೆಯ ಸಾಹಿತಿಗಳು ಹಾಗೂ ಮಕ್ಕಳ ಸಾಹಿತಿಗಳಾದ ಪ.ರಾಮಕೃಷ್ಣ ಶಾಸ್ತ್ರಿಗಳು ಆಗಮಿಸಿದ್ದರು.

ಕಾರ್ಯಕ್ರಮವನ್ನು ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಸೂರ್ಯನಾರಾಯಣ ಪುತ್ತೂರಾಯರು ಶಾಸ್ತ್ರಿರವರ ಜೀವನ ಮತ್ತು ಸಾಧನೆ ಬಗ್ಗೆ ವಿವರಿಸಿದರು.ನಂತರದಲ್ಲಿ ಶಾಲಾ ವತಿಯಿಂದ ಶ್ರೀಯುತರಿಗೆ ಕಿರು ಸನ್ಮಾನ ಕಾರ್ಯಕ್ರಮ ನಡೆಯಿತು.

ಈ ವೇಳೆಯಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ನೆರವೇರಿಸಿದರು.ನಂತರ ಕನ್ನಡ ಶಿಕ್ಷಕಿ ಶುಭಾರವರು ಮಾತನಾಡಿ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯ ಈ ತಿಂಗಳಿನಲ್ಲಿ ಸೂಕ್ತವೆನಿಸುವ ಸಂಪನ್ಮೂಲ ವ್ಯಕ್ತಿಗಳು ಇವರಾಗಿದ್ದು ಇದರ ಜೊತೆಯಲ್ಲಿ ಶ್ರೀಯುತರ ಸರಳ ಸಜ್ಜನಿಕೆಯ ವ್ಯಕ್ತಿತ್ವ ಇಂದಿನ ವಿದ್ಯಾರ್ಥಿಗಳಿಗೆ ಮಾದರಿ ಎಂದರು.ಇವರ ಈ ಗುಣಗಳು ತಮ್ಮ ವಿದ್ಯಾರ್ಥಿಗಳಿಗೆ ಸಾಹಿತ್ಯ ಆಸಕ್ತಿಯನ್ನು ಮೂಡಿಸುವ ರೀತಿಯಲ್ಲಿ ಆಗಲಿ ಎಂಬುದೇ ಈ ಕಾರ್ಯಕ್ರಮ ಆಶಯವೆಂದು ತಿಳಿಸಿದರು.

ನಂತರದಲ್ಲಿ ಪ.ರಾಮಕೃಷ್ಣ ಶಾಸ್ತ್ರೀಗಳು ಸರಳ ಸುಂದರ ಮಾತುಗಳ ಮೂಲಕ ವಿದ್ಯಾರ್ಥಿಗಳಿಗೆ ವಿವಿಧ ಕಥೆಗಳನ್ನು ಹೇಳಿದರು.ಇದರಲ್ಲಿ ಜೀವನ ಮೌಲ್ಯ, ಆದರ್ಶಮಯ ಅಂಶಗಳು, ಶಿಸ್ತು ಮತ್ತು ದೇಶಭಕ್ತಿಯ ಅಂಶಗಳು ಅಡಕವಾಗಿತ್ತು.ಒಟ್ಟಿನಲ್ಲಿ ಸದ್ವಿಚಾರಗಳಿಂದ ಕೂಡಿದ ಈ ಕಾರ್ಯಕ್ರಮದ ವೇದಿಕೆಯಲ್ಲಿ ಸನ್ಮಾನಿತರು, ಶಾಲಾ ಮುಖ್ಯ ಶಿಕ್ಷಕರು ಹಾಗೂ ಹಿರಿಯ ಶಿಕ್ಷಕರಾದ ದಿನಕರ್ ನಾಯಕ್ ರವರು ಉಪಸ್ಥಿತರಿದ್ದು, ಶಾಲೆಯ ಸಮಸ್ತ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಪುತ್ತೂರಾಯರು ಸ್ವಾಗತಿಸಿ, ವಿದ್ಯಾಶೆಣೈರವರು ವಂದನಾರ್ಪಣೆಗೈದು, ಶುಭಾರವರು ನಿರೂಪಿಸಿದರು.

p>

LEAVE A REPLY

Please enter your comment!
Please enter your name here