ಚಾರ್ಮಾಡಿ ಕಕ್ಕಿಂಜೆಯಲ್ಲಿ ಇನ್ನೋವಾ ಕಾರು ಕಳವು-ದೂರು ದಾಖಲು

0

ಬೆಳ್ತಂಗಡಿ: ಉಳ್ಳಾಲ ತಾಲೂಕಿನ ಇಸಾಕ್ ಎಂ.ರವರ ಇನ್ನೋವಾ ಕಾರು ಚಾರ್ಮಾಡಿ ಗ್ರಾಮದ ಕಕ್ಕಿಂಜೆಯಲ್ಲಿ ಕಳವಾದ ಕುರಿತು ಕೇಸು ದಾಖಲಾಗಿದೆ.

ಇಸಾಕ್‌ರವರ ಇನ್ನೋವಾ ಕಾರನ್ನು ಇಸಾಕ್‌ರವರ ಸಂಬಂಧಿ ನೌಫಾಲ್ ಎಂಬವರು ನ.9ರಂದು ರಾತ್ರಿ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಕಕ್ಕಿಂಜೆಯಲ್ಲಿರುವ ತನ್ನ ಮನೆಯ ಕಾರ್ ಶೆಡ್ಡಿನಲ್ಲಿ ಇರಿಸಿದ್ದರು. ನ.10ರಂದು ಬೆಳಿಗ್ಗೆ ನೋಡಿದಾಗ ಕಾರು ಶೆಡ್ಡಿನಿಂದ ಕಳವಾಗಿತ್ತು.ಆಸುಪಾಸುಗಳಲ್ಲಿ ಹುಡುಕಾಡಿದರೂ ಕಾರು ಪತ್ತೆಯಾಗಿಲ್ಲ.

ಈ ನಿಟ್ಟಿನಲ್ಲಿ ಇಸಾಕ್‌ರವರು ಕಾರು ಕಳವು ಕುರಿತು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಕಳವಾದ ಇನ್ನೋವಾ ಕಾರಿನ ಈಗಿನ ಮೌಲ್ಯ ರೂ 2,25,000 ಎಂದು ಅಂದಾಜಿಸಲಾಗಿದೆ.

LEAVE A REPLY

Please enter your comment!
Please enter your name here