ಧರ್ಮಸ್ಥಳ: ಶತಾಯಿಷಿ ಮತದಾರರಿಗೆ ಚುನಾವಣಾ ಆಯೋಗದಿಂದ ಗೌರವಪೂರ್ವಕ ಸನ್ಮಾನ

0

ಧರ್ಮಸ್ಥಳ: ಭಾರತ ಚುನಾವಣಾ ಆಯೋಗ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಸ್ವೀಪ್ ಸಮಿತಿ ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ 100 ವರ್ಷ ವಯಸ್ಸು ದಾಟಿದ ಶತಾಯಿಷಿ ಮತದಾರರನ್ನು ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಜಿಕುರಿ ಎಂಬಲ್ಲಿಯ ಪಾತುಮ ಪೋಕೆಕುಂಞ 104 ವರ್ಷ ಹಾಗೂ ಕನ್ಯಾಡಿ ಹಿಪ್ಪ ಎಂಬಲ್ಲಿಯ ಮುದ್ದ s/0 ತನಿಯ 101 ವರ್ಷ ಎಂಬವರಿಗೆ “ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ನಿಮ್ಮ ನಿರಂತರ ಕೊಡುಗೆಗಾಗಿ ಧನ್ಯವಾದ ತಿಳಿಸಲು ಆಯೋಗವು ಹರ್ಷಿಸುತ್ತದೆ.ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ನಿರಂತರವಾಗಿ ಭಾಗವಹಿಸುತ್ತಾ ಆ ಮೂಲಕ ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸಿ ನೀವು ದೇಶದ ಯುವಕರಿಗೆ ಮಾದರಿಯಾಗಿದ್ದೀರಿ ನಿಮ್ಮಂತಹ ಜವಾಬ್ದಾರಿಯಿಂದ ಹಿರಿಯ ಮತದಾರರಿಂದಾಗಿ ನಾವು ಜಗತ್ತಿನ ಪ್ರಜಾಪ್ರಭುತ್ವದಲ್ಲಿ ಪ್ರವರ್ಧಮಾನವಾಗಿ ಪ್ರಜ್ವಲಿಸಲಿದ್ದೇವೆ.ನೀವು ದೇಶದ ಬದಲಾಗುತ್ತಿರುವ ಕಾಲ, ಸಾಮಾಜಿಕ ರಾಜಕೀಯ ಆರ್ಥಿಕ ಅಭಿವೃದ್ಧಿ ಮತ್ತು ತಂತ್ರಜ್ಞಾನ ವಿಕಾಸದ ಸಾಕ್ಷಿಯಾಗಿದ್ದೀರಿ. ಚುನಾವಣಾ ಪ್ರಕ್ರಿಯೆಯನ್ನು ಬಲಪಡಿಸಲು ಮತ್ತು ಚುನಾವಣೆಗಳನ್ನು ನಿಜವಾದ ಅರ್ಥದಲ್ಲಿ ಮುಕ್ತ, ನ್ಯಾಯ ಸಮ್ಮತ, ಒಳಗೊಳ್ಳುವ, ಸುಗಮ ಮತ್ತು ಭಾಗವಹಿಸುವಂತೆ ಮಾಡಲು ಆಯೋಗದ ನಿರಂತರ ವಿಕಾಸದ ಕಾರ್ಯವಿಧಾನಕ್ಕೆ ನೀವು ಸಾಕ್ಷಿಯಾಗಿದ್ದೀರಿ, ವಿವಿಧ ಚುನಾವಣೆಗಳಲ್ಲಿ ನಿಮ್ಮ ಮತವನ್ನು ಚಲಾಯಿಸುವ ಮೂಲಕ ನಿಮ್ಮ ಸರಕಾರದ ಆಯ್ಕೆಯನ್ನು ನಿರ್ಧರಿಸುವಲ್ಲಿ ನಿಮ್ಮ ಒಂದು ಮತದ ಮೌಲ್ಯದ ನಿಜವಾದ ಅರ್ಥವನ್ನು ನೀವು ಸಾಬೀತುಪಡಿಸಿದ್ದೀರಿ.ಆಯೋಗವು ರಾಷ್ಟ್ರ ನಿರ್ಮಾಣದ ಕಡೆಗೆ ಪ್ರಜಾಸತ್ತಾತ್ಮಕ ಕರ್ತವ್ಯವನ್ನು ಪೂರೈಸಿದ್ದಕ್ಕಾಗಿ ನಿಮ್ಮ ಸಾಮರ್ಥ್ಯ ಸ್ಥಿತಿಸ್ಥಾಪಕತ್ವ ಮತ್ತು ನಿರ್ಣಾಯಕ ಪಾತ್ರವನ್ನು ಗೌರವಿಸುತ್ತದೆ.ಹಿರಿಯ ನಾಗರಿಕರು ಗರಿಷ್ಠ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಚುನಾವಣಾ ಆಯೋಗವು ಗಾಳಿ ಕುರ್ಚಿಗಳು, ಇಳಿಜಾರು ವ್ಯವಸ್ಥೆ, ಸ್ವಯಂಸೇವಕರು, ಉಚಿತ ಸಾರಿಗೆ ಹಾಗೂ ಸಾರಥಿ ಸಾಲಿನಲ್ಲಿ ಕಾಯದೆ ನೇರ ಮತದಾನದಂತ ಹಲವಾರು ಹೊಸ ಸೌಲಭ್ಯವನ್ನು ನಿಮ್ಮೆಲ್ಲರಿಗೂ ಹೊರತಂದಿದೆ.ಈ ಎಲ್ಲಾ ಸೌಲಭ್ಯಗಳನ್ನು ಬಳಸಿ ಮತವನ್ನು ಚಲಾಯಿಸಲು ಪ್ರೇರೇಪಿಸುತಿದ್ದೇವೆ.ನಾವು ಈ ಮೂಲಕ ನಿಮಗೆ ನಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಹಾಗೂ ಎಲ್ಲ ಹಿರಿಯ ನಾಗರಿಕರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ಇದೇ ರೀತಿಯ ಉತ್ಸಾಹದೊಂದಿಗೆ ಭಾಗವಹಿಸುವಂತೆ ಮತ್ತು ಭಾರತೀಯ ಪ್ರಜಾಪ್ರಭುತ್ವಕ್ಕೆ ಮತದಾನ ಪ್ರಕ್ರಿಯೆಯಲ್ಲಿ ಸಕರಾತ್ಮಕ ಕೊಡುಗೆ ನೀಡುವಲ್ಲಿ ಯುವ ಮತದಾರರಿಗೆ ಮಾದರಿಯಾಗಿ ಮುಂದುವರೆಯಲು ಮನವಿ ಮಾಡುತ್ತೇವೆ” ಎಂಬ ಮುಲೈ ಮುಗಿಲನ್ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಡಾ.ಆನಂದ್ ಕೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಸ್ವೀಟ್ ಸಮಿತಿ ಅಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲೆ ಇವರು ನೀಡಿದ ಅಭಿನಂದನ ಪತ್ರವನ್ನು ನೀಡಿ ಗೌರವ ಪೂರಕವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಿ.ಶ್ರೀನಿವಾಸ್ ರಾವ್, ಪಂಚಾಯತ ಅಭಿವೃದ್ಧಿ ಅಧಿಕಾರಿ ಉಮೇಶ್, ಬೂತ್ ಮಟ್ಟದ ಅಧಿಕಾರಿಗಳಾದ ಡಾ.ದೇವಿಪ್ರಸಾದ್ ಬೊಲ್ಮ, ಶೇಖರ ಉಪಸ್ಥಿತರಿದ್ದರು.

ಚುನಾವಣಾ ಆಯೋಗದ ಈ ಕಾರ್ಯಕ್ರಮಕ್ಕೆ ಹಿರಿಯ ಮತದಾರರು ಸಂತಸ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here