ಸಂತ ತೆರೇಸಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ

0

ಬೆಳ್ತಂಗಡಿ: ನ.18ರಂದು ಸಂತ ತೆರೇಸಾ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಯಿತು.

ಕ್ರೀಡಾಕೂಟದ ಅಧ್ಯಕ್ಷರಾಗಿ ಸಂತ ತೆರೇಸಾ ಕಾನ್ವೆಂಟಿನಾ ಸುಫೀರಿಯರ್ ಸಿಸ್ಟರ್ ಜೆಸಿಂತ ಭಾರೆಟ್ಟೋ, ಮುಖ್ಯ ಅತಿಥಿಯಾಗಿ ಆಲ್ವಿನ್ ಜೆರೋಮ್ ಡಿಸೋಜ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾದ ಜೋಸೆಫ್, ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಹೆರಾಲ್ಡ್ ನೊರೋನಾ ಹಾಗೂ ಪ್ರಾಂಶುಪಾಲೆ ಭಗಿನಿ ಆರೋಗ್ಯರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಾರ್ಥನಾ ಗೀತೆಯೊಂದಿಗೆ, ಸಭಾ ಕಾರ‍್ಯಕ್ರಮವನ್ನು ಪ್ರಾರಂಭಿಸಿ ಕ್ರೀಡಾ ಜ್ಯೋತಿಯನ್ನು ಬೆಳಗಿಸುವ ಮುಖಾಂತರ ಕಾರ‍್ಯಕ್ರಮವನ್ನು ಉದ್ಘಾಟಿಸಲಾಯಿತು.ಬಂದ ಅತಿಥಿಗಳನ್ನು ವಿಜ್ಞಾನ ವಿಭಾಗದ ಮುಖ್ಯಸ್ಥರು ಸ್ವಾಗತಿಸಿದರು.ಮುಖ್ಯ ಅತಿಥಿಗಳು ವಿದ್ಯಾರ್ಥಿಗಳನ್ನು ಉತ್ತೇಜಿಸುವ ಮಾತುಗಳನ್ನು ಮಾತನಾಡಿದರು.

ಅಧ್ಯಕ್ಷರು ಅಧ್ಯಕ್ಷೀಯ ಭಾಷಣದಲ್ಲಿ ಕ್ರೀಡಾಕೂಟಕ್ಕೆ ಶುಭವನ್ನು ಕೋರಿದರು.ಹೋಲಿ ರೆಡಿಮಾರ್ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಕ ಶರತ್ ಇವರ ಮುಂದಾಳತ್ವದಲ್ಲಿ ಎಲ್ಲಾ ಕ್ರೀಡೆಗಳು ಸುಸೂತ್ರವಾಗಿ ನಡೆದವು. ಕಾರ‍್ಯಕ್ರಮವನ್ನು ಕಾಲೇಜಿನ ಉಪನ್ಯಾಸಕಿ ಸಿಲ್ವಿಯಾ ಪಿಂಟೋರವರು ನಿರೂಪಿಸಿ ಕಾಲೇಜಿನ ಉಪನ್ಯಾಸಕಿಯಾದ ನಿರೀಕ್ಷರವರು ಎಲ್ಲರನ್ನು ವಂದಿಸಿದರು.

ರಾಷ್ಟ್ರಗೀತೆಯೊಂದಿಗೆ ಕಾರ‍್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.ಕಾರ‍್ಯಕ್ರಮದಲ್ಲಿ ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here