


ಬೆಳ್ತಂಗಡಿ: ನಲವತ್ತು ವರ್ಷಗಳಿಂದ ಕತೆ ಬರೆಯುತ್ತಾ, ಕತೆ ಓದುತ್ತಾ ಬಂದಿರುವ ಮತ್ತು ಮೂವತ್ತೆರಡು ಕಥಾ ಕಮ್ಮಟಗಳನ್ನು ನಡೆಸಿರುವ ಅನುಭವದ ಹಿನ್ನೆಲೆಯಲ್ಲಿ ಖ್ಯಾತ ಪತ್ರಕರ್ತ, ಹಿರಿಯ ಸಾಹಿತಿ ‘ಜೋಗಿ’ ಎಂದೇ ಖ್ಯಾತರಾಗಿರುವ ಗಿರೀಶ್ ರಾವ್ ಅವರ ಕತೆಗಾರರ ಕೈಪಿಡಿ ಪುಸ್ತಕ ಬಿಡುಗಡೆ ನ.19ರಂದು ನಡೆಯಲಿದೆ.


ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯವರಾದ ಜೋಗಿ ಅವರ 448 ಪುಟಗಳ ಈ ಪುಸ್ತಕ ಕತೆಯ ಕುರಿತಾದ ಸಮಗ್ರ ಕೈಪಿಡಿಯಾಗಿದೆ.ಬೆಲೆ ರೂ.500 ಆಗಿದೆ. ನ.19ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆಗೊಳ್ಳಲಿದೆ.
ಅಲ್ಲಿ ಈ ಪುಸ್ತಕ ರೂ.400ಕ್ಕೆ ಸಿಗುತ್ತದೆ.8660404034 ನಂಬರಿಗೆ ಫೋನ್ ಮಾಡಿದರೆ ರೂ 425ಕ್ಕೆ ಮನೆಗೆ ತಲುಪಿಸುತ್ತಾರೆ.ಡೆಲಿವರಿ ಚಾರ್ಜ್ ಇಲ್ಲ ಎಂದು ಪ್ರಕಟಣೆ ತಿಳಿಸಿದೆ.








