ಪುಂಜಾಲಕಟ್ಟೆ: ಸರಕಾರಿ ಪ್ರಥಮದರ್ಜೆ ಕಾಲೇಜು ಪುಂಜಾಲಕಟ್ಟೆ, ರಾಷ್ಟ್ರೀಯ ಸೇವಾ ಯೋಜನೆ ಘಟಕ 1 & 2, ಭಾರತೀಯ ಯುವ ರೆಡ್‌ಕ್ರಾಸ್ ಮತ್ತು ರೋವರ್ಸ್ ರೇಂಜರ್ಸ್ ಇದರ ಸಹಯೋಗದಿಂದ 70ನೇ ಅಖಿಲ ಭಾರತ ಸಹಕಾರ ಸಪ್ತಾಹ-2023 ಇದರ ಅಂಗವಾಗಿ ಪುಂಜಾಲಕಟ್ಟೆ ಸನಿಹದ ಪಿಲಾತಬೆಟ್ಟು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ವಠಾರದಲ್ಲಿ ಕಾರ್ಯಕ್ರಮ ನಡೆಸಲಾಯಿತು.
ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನವೆಂಬರ್ 14 ಜವಾಹರ್ ಲಾಲ್ ನೆಹರೂ ಅವರ ಹುಟ್ಟು ಹಬ್ಬವಾಗಿದ್ದು, ನೆಹರೂ ಅವರು ಸಹಕಾರ ಚಳುವಳಿಯ ಬೆಳವಣಿಗೆಗೆ ನೀಡಿದ ಪ್ರೋತ್ಸಾಹಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸುವ ಸಂಕೇತವಾಗಿ ಅವರ ಹುಟ್ಟು ಹಬ್ಬದಂದು ಸಪ್ತಾಹದ ಉದ್ಘಾಟನೆ ಮಾಡಲಾಯಿತು.ರಾಷ್ಟ್ರ ರಾಜ್ಯ ಮಟ್ಟದಲ್ಲಿ ಈ ವಿಷಯಗಳ ಕುರಿತು ವಿಚಾರಗೋಷ್ಠಿಗಳು, ಚಿಂತನ ಮಂಥನ ಕಾರ್ಯಕ್ರಮಗಳನ್ನು ಆಯೋಜಿಸಿ ಯುವಜನರಲ್ಲಿ ಸಹಕಾರದ ಕುರಿತು ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.ಈ ಕಾರ್ಯಕ್ರಮದಲ್ಲಿ ಸಹಕಾರಿ ಸಂಘದ ಮಹತ್ವ, ಒದಗಿಸಿ ಕೊಡುವ ಸೌಲಭ್ಯ ಹಾಗು ತತ್ವಗಳ ಕುರಿತಾಗಿ ಧರಣೇಂದ್ರ ಜೈನ್ ಇವರು ವಿದ್ಯಾರ್ಥಿಗಳಿಗೆ ತಿಳಿಸಿದರು.