ಉಜಿರೆ: ಉಜಿರೆಯ ಕುಂಟಿನಿ ಎಸ್ ಸಿ ಕಾಲನಿಯಲ್ಲಿ ಪ್ರತಿ ವರ್ಷದಂತೆ 9 ನೇ ವರ್ಷದ ಸಾಮೂಹಿಕ ದೀಪಾವಳಿಯನ್ನು ನ.14ರಂದು ಆಚರಿಸಲಾಯಿತು.
ಲಕ್ಷ್ಮಿ ಪೂಜೆಯನ್ನು ಉಜಿರೆದ ದಂತ ವೈದ್ಯ ಡಾ.ಎಂ ಎಂ.ದಯಾಕರ್ ಭಟ್ ನೆರವೇರಿಸಿದರು.ಕಾಲನಿಯ ಸರ್ವರೂ ಶ್ರದ್ಧೆ ಭಕ್ತಿಗಳಿಂದ ಪಾಲ್ಗೊಂಡರು.ಮಹಾಲಕ್ಷ್ಮಿ ಮಂತ್ರೋಪದೇಶವನ್ನು ಕಾಲನಿಯ ಹಿರಿಕಿರಿಯರೆನ್ನದೆ ನೀಡಲಾಯಿತು.ಮಹಾಲಕ್ಷ್ಮಿಯ ಅನುಗ್ರಹದಿಂದ ಜೀವನದಲ್ಲಿ ಸಂತಾನ ಸಂಪತ್ತು ಆರೋಗ್ಯ ಮತ್ತು ಸುಖ ಗಳಿಸಬಹುದು ಎಂದು ಮಂತ್ರೋಪದೇಶ ನೀಡಿದ ಡಾ.ದಯಾಕರ್ ವಿವರಿಸಿದರು.
ಪ್ರತೀ ಮನೆಗೆ ನೀಡಿದ ತುಳಸಿಕಟ್ಟೆ ಯ ಅಲಂಕಾರ ಮತ್ತು ಬಲಿಂದ್ರ ಲೆಪ್ಪು ಇವುಗಳನ್ನೂ ತಮ್ಮ ಮನೆಗಳಲ್ಲಿ ನಿಷ್ಠೆಯಿಂದ ಆಚರಿಸುವಂತೆ ವಿವರಿಸಲಾಯಿತು.
ಕಿರಿಯರೆಲ್ಲರೂ ತಮಗಿಂತ ಹಿರಿಯರ ಪಾದಗಳಿಗೆ ವಂದಿಸಿ ಆಶೀರ್ವಾದ ಪಡೆದರು. ಹಬ್ಬದ ಸಂಭ್ರಮ ಆಚರಣೆಗಾಗಿ ಕಾಲನಿಯ ಪ್ರತೀ ಮನೆಗಳಿಗೆ ಅಕ್ಕಿ ಬೆಲ್ಲ ಬೇಳೆ ತೆಂಗಿನಕಾಯಿ ಮತ್ತು ಪಟಾಕಿಗಳನ್ನು ವಿತರಿಸಲಾಯಿತು.
ಸಮಸ್ತರೂ ಹಣತೆಗಳನ್ನು ಬೆಳಗಿ ಸುಡುಮದ್ದು ಸಿಡಿಸಿ ಸಂಭ್ರಮಿಸಿದರು.ಸಂಘದ ಉನ್ನತ ಅಧಿಕಾರಿ ಶಿವಪ್ರಸಾದ್ ಮಲೆಬೆಟ್ಟು ಮುಖ್ಯ ಅತಿಥಿಗಳಾಗಿ ಆಗಮಿಸಿ ದೀಪಾವಳಿಯ ಮಹತ್ವ ವಿವರಿಸಿದರು.
ಪೃಥ್ವಿರಾಜ್ ಶೆಟ್ಟಿ ಮಾತನಾಡಿ ಇಂತಹ ಕಾರ್ಯಕ್ರಮ ಆಯೋಜಿಸಿದ ವರು ಶ್ಲಾಘನೀಯ ಎಂದರು.
ಕೃಷ್ಣಪ್ಪ ಉಪಸ್ಥಿತರಿದ್ದರು.ರೋಟರಿ ಆನ್ಸ್ ಕ್ಲಬ್ ಬೆಳ್ತಂಗಡಿ ಅಧ್ಯಕ್ಷೆ ಸಿಹಿತಿಂಡಿಗಳನ್ನು ವಿತರಿಸಿದರು.