ಬೆಳ್ತಂಗಡಿ: ಶಾಲಾ ಶಿಕ್ಷಣ ಇಲಾಖಾ ವತಿಯಿಂದ ಬೆಳ್ತಂಗಡಿ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಹೋಲಿ ರೆಡೀಮರ್ ಆಂಗ್ಲಮಾಧ್ಯಮ ಪ್ರೌಢಶಾಲೆ ಬೆಳ್ತಂಗಡಿಯಲ್ಲಿ ನ.7ರಂದು ನಡೆಯಿತು.ಕಾರ್ಯಕ್ರಮವನ್ನು ಬೆಳ್ತಂಗಡಿ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ತಚ್ಚಮೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಮಾದರಿಗಳನ್ನು ತಯಾರಿಸುವಾಗ ಅವರಲ್ಲಿ ಅವರ ವೈಜ್ಞಾನಿಕ ಚಿಂತನೆಯ ವ್ಯಾಪ್ತಿ ಹೆಚ್ಚಾಗುತ್ತದೆ.ಹಾಗಾಗಿ ವೈಜ್ಞಾನಿಕ ಮಾದರಿಗಳು ಯಾವುದೇ ಆಗಿರಲಿ ಅದನ್ನು ತಯಾರಿಸುವ ಕಾರ್ಯದಲ್ಲಿ ವಿದ್ಯಾರ್ಥಿಯು ತನ್ನನ್ನು ತೊಡಗಿಸಿಕೊಳ್ಳುವುದು ಪ್ರಮುಖವಾಗಿದೆ.ಆದುದರಿಂದ ವಿದ್ಯಾರ್ಥಿಗಳು ಬಹುಮಾನವನ್ನು ನಿರೀಕ್ಷಿಸದೆ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಬೇಕು ಮತ್ತು ಶಿಕ್ಷಕರು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಎಂದರು.
ಬೆಳ್ತಂಗಡಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಮೋಹನ್ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಸುಜಯ ಆಗಮಿಸಿದ್ದರು.ವಸ್ತು ಪ್ರದರ್ಶನದ ನೋಡಲ್ ಅಧಿಕಾರಿ ಶಿಕ್ಷಣ ಸಂಯೋಜಕ ಸಿದ್ದಲಿಂಗ ಸ್ವಾಮಿ ಪ್ರಸ್ತಾವನೆ ಮಾಡಿದರು.ಹೋಲಿ ರೆಡಿಮರ್ ಆಂಗ್ಲಮಾಧ್ಯಮ ಶಾಲೆ ಶಿಕ್ಷಕಿ ಬ್ಲೆಂಡಿನ್ ಸ್ವಾಗತಿಸಿ, ಶಿಕ್ಷಣ ಸಂಯೋಜಕಿ ಚೇತನಾಕ್ಷಿ ವಂದಿಸಿದರು.
ತೀರ್ಪುಗಾರರಾಗಿ ಸರಕಾರಿ ಪ್ರೌಢಶಾಲೆ ಅಳಿಯೂರು ಮೂಡಬಿದ್ರಿ ತಾಲೂಕಿನ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ವಿ ಆಚಾರ್ ಮತ್ತು ಸರಕಾರಿ ಪದವಿಪೂರ್ವ ಕಾಲೇಜು ಬೆಳ್ತಂಗಡಿ ಗಣಿತ ಉಪನ್ಯಾಸಕ ಮೋಹನ್ ಭಟ್ ಉಪಸ್ಥಿತರಿದ್ದರು.ಶಿಕ್ಷಕರಾದ ಮಹೇಂದ್ರ ಪೂಜಾರಿ, ಉಜಿರೆ ಸಿ.ಆರ್.ಪಿ ಪ್ರಮಿಳಾ ಸಹಕರಿಸಿದರು.
ವಿಜೇತರಾದ ವಿದ್ಯಾರ್ಥಿಗಳಿಗೆ ಹೋಲಿ ರೆಡೀಮರ್ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಫಾದರ್ ಕ್ಲಿಫರ್ಡ್ ಪಿಂಟೊ ಬಹುಮಾನ ವಿತರಿಸಿದರು.ಬೆಳ್ತಂಗಡಿ ವಲಯ ಸಿ.ಆರ್.ಪಿ ವಾರಿಜ ನಿರೂಪಿಸಿದರು.
ವೈಯಕ್ತಿಕ ವಿಭಾಗದಲ್ಲಿ ಸ್ಪೂರ್ತಿ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ಉಜಿರೆ ದ್ವಿತೀಯ, ಹರೀಶ್ ಎಸ್.ಡಿ.ಎಂ ಆಂಗ್ಲಮಾಧ್ಯಮ ಶಾಲೆ ಉಜಿರೆ, ತೃತೀಯ ದೀಪಕ್ ಸರಕಾರಿ ಪ್ರೌಢಶಾಲೆ ನಾರಾವಿ ಬಹುಮಾನ ಪಡೆದರು.
ಗುಂಪು ವಿಭಾಗದಲ್ಲಿ ಪ್ರಥಮ ಶ್ರೀಶ ಎಸ್ ಪ್ರಭು ಮತ್ತು ಶಾಲಿನಿ ವಾಣಿ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ, ದ್ವಿತೀಯ ಮನೀಶ್ ಮತ್ತು ಅದ್ವಿತ್ ಶೆಟ್ಟಿ ಸರಕಾರಿ ಪ್ರೌಢಶಾಲೆ ಗುರುವಾಯನಕೆರೆ, ತೃತೀಯ ದಿವ್ಯಶ್ರೀ ಮತ್ತು ಹನಾಫಾತಿಮಾ ಸೇಕ್ರೇಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ಮಡಂತ್ಯಾರ್ ಬಹುಮಾನ ಪಡೆದುಕೊಂಡರು.