ಜಿನ ಭಜನೆ ಸ್ಪರ್ಧೆಯಲ್ಲಿ ಉಜಿರೆಯ 4 ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆ

0

ಉಜಿರೆ: ಭಾರತೀಯ ಜೈನ್ ಮಿಲನ್ ವಲಯ 8ರ ಮಂಗಳೂರು ವಿಭಾಗದ 2023-24ನೇ ಸಾಲಿನ ಜಿನ ಭಜನಾ ಸ್ಪರ್ಧೆಯು ಈ ಬಾರಿ ವೇಣೂರಿನಲ್ಲಿ 2024ರ ಫೆಬ್ರವರಿಯಲ್ಲಿ ಜರಗುವ ಮಹಾಮಸ್ತಕಾಭಿಷೇಕದ ಮಹಾಮಜ್ಜನದ ಆಶಯದೊಂದಿಗೆ ನ.05ರಂದು ಜಿನ ಭಜನಾ ಸ್ಪರ್ಧೆಯು ಬಹಳ ಅದ್ದೂರಿಯಾಗಿ ಹಿರಿಯರ 59 ಮತ್ತು ಕಿರಿಯರ 32 ತಂಡಗಳು ಒಟ್ಟು 91 ತಂಡಗಳೊಂದಿಗೆ ಸ್ಪರ್ಧಾ ರೂಪದಲ್ಲಿ ಜರುಗಿಸಲಾಯಿತು.

ಈ ಸ್ಪರ್ಧೆಯಲ್ಲಿ ಉಜಿರೆ ಸೋನಿಯಾ ವರ್ಮರವರ ಮಾರ್ಗದರ್ಶನದಲ್ಲಿ ಹಿರಿಯರ ವಿಭಾಗದಲ್ಲಿ ದ್ವಿತೀಯ ಮತ್ತು ಆರನೇ ಸ್ಥಾನ ಹಾಗೂ ಕಿರಿಯರ ವಿಭಾಗದಲ್ಲಿ ಎಸ್. ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ), ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸ್ಟೇಟ್) ಉಜಿರೆ, ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ ವಿದ್ಯಾರ್ಥಿನಿಯರನ್ನೊಳಗೊಂಡ ಎರಡು ತಂಡಗಳಲ್ಲಿ ಪ್ರಥಮ ಮತ್ತು ನಾಲ್ಕನೇ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

LEAVE A REPLY

Please enter your comment!
Please enter your name here