ಧರ್ಮಸ್ಥಳ: ಮಾನ್ವಿ ಶ್ರೀ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆಯು ನ.08ರಂದು ಒಕ್ಕೂಟದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು.
ಮಹಾಸಭೆಯಲ್ಲಿ ಒಕ್ಕೂಟದ ಅದ್ಯಕ್ಷರು ಉಪಾಧ್ಯಕ್ಷರು, ತಾಲೂಕು ಮ್ಯಾನೇಜರ್ ನಿತೇಶ್ ಸರ್, ವಲಯ ಮೇಲ್ವಿಚಾರಕರಾದ ವೀಣಾ ಶ್ರೀ, ಪಂಚಾಯತ್ ಉಪಾಧ್ಯಕ್ಷ ಪಿ.ಶ್ರೀನಿವಾಸ್ ರಾವ್, ಪಂಚಾಯತ್ ಕಾರ್ಯದರ್ಶಿ ದಿನೇಶ್.ಕೆ ಹಾಗೂ ಒಕ್ಕೂಟದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ದೀಪ ಬೆಳಗಿಸುವುದರ ಮೂಲಕ ಮಹಾಸಭೆಯನ್ನು ಪ್ರಾರಂಭಿಸಲಾಯಿತು.
ಪಂಚಾಯತ್ ಉಪಾಧ್ಯಕ್ಷರು ಮಾತನಾಡಿ, ಮಹಿಳೆಯರಿಗೆ ಸ್ವ ಉದ್ಯೋಗ ಮಾಡಲು ಪಂಚಾಯತ್ ನಿಂದ ಸಹಕಾರ ಮಾಡುತ್ತೇವೆ ಎಂದು ತಿಳಿಸಿದರು.
ತಾಲೂಕು ಮ್ಯಾನೇಜರ್ ನಿತೇಶ್ ರವರು ಒಕ್ಕೂಟದ ನಿಯಮ ನಿಬಂಧನೆಗಳು, ಧ್ಯೇಯೋದ್ದೇಶಗಳು ಮತ್ತು ಜೀವನೋಪಾಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೆ.ಎಸ್.ಆರ್.ಎಲ್.ಪಿ.ಎಸ್ ಬೆಳ್ತಂಗಡಿಯ ಎನ್.ಆರ್.ಎಲ್.ಎಂ ನ ಎಂ.ಐ.ಎಸ್ ನಲ್ಲಿ ಅತ್ಯುತ್ತಮ ಸಾಧನೆ ಮಾಡಿ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಪ್ರಶಸ್ತಿಯನ್ನು ಪಡೆದಿರುವ ನಿತೇಶ್ ಇವರಿಗೆ ಅಭಿನಂದಿಸಲಾಯಿತು.
ಒಕ್ಕೂಟದಿಂದ ನಿರ್ಗಮಿಸಿದ ಸದಸ್ಯರಿಗೆ ಗೌರವಿಸಲಾಯಿತು.ಮಹಿಳೆಯರಿಗೆ ಮನರಂಜನೆ ಆಟಗಳನ್ನು ಹಮ್ಮಿಕೊಳ್ಳಲಾಗಿದ್ದು , ಇದನ್ನು ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳಾದ ದೇವಿಕಾ, ಪ್ರಕೃತಿ, ಕೆಜಿಯ, ಬಿಷನ್ ಇವರು ನಡೆಸಿಕೊಟ್ಟರು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಒಕ್ಕೂಟದ ನೂತನ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ ಪದಾಧಿಕಾರಿಗಳ ಪದಗ್ರಹಣ ನಡೆಯಿತು.ವಲಯ ಮೇಲ್ವಿಚಾರಕರಾದ ವೀಣಾಶ್ರೀ ರವರು ಒಕ್ಕೂಟದ ನೂತನ ಪದಾಧಿಕಾರಿಗಳ ಜವಾಬ್ಧಾರಿ, ಕಾರ್ಯವೈಖರಿ ಮತ್ತು ತೊಡಗಿಸಿಕೊಳ್ಳುವಿಕೆಯ ಕುರಿತು ಮಾರ್ಗದರ್ಶನ ನೀಡಿದರು.
ಎಲ್.ಸಿ.ಆರ್.ಪಿ ಪುಷ್ಪಾವತಿ ಯವರು ವರದಿ ಮಂಡನೆ ಮಾಡಿದರು.ಪದಾಧಿಕಾರಿ ವಿದ್ಯಾಶ್ರೀ ಯವರು ವಾರ್ಷಿಕ ಲೆಕ್ಕಪತ್ರ ಮಂಡನೆ ಮಾಡಿದರು.ಎಂ.ಬಿ.ಕೆ ಚಂದ್ರಾವತಿ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ವೇದಾವತಿಯವರು ಪ್ರಾರ್ಥನೆ ಹಾಡಿ, ಕೃಷಿ ಸಖಿ ಸುಚೇತಾರವರು ಸ್ವಾಗತ ಮಾಡಿದರು.ಪಶುಸಖಿ, ಸಂಜೀವಿನಿ, ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿದ್ದರು. ಎಲ್.ಸಿ.ಆರ್.ಪಿ ಪುಷ್ಪಾವತಿ ಯವರು ಧನ್ಯವಾದವಿತ್ತರು.
ಕಾರ್ಯಕ್ರಮಕ್ಕೆ ವಿಶೇಷವಾಗಿ ಸಹಕರಿಸಿದವರು: ಒಕ್ಕೂಟದ ಅಧ್ಯಕ್ಷರಾದ ರಮ್ಯಾ ಮಹೇಶ್, ಒಕ್ಕೂಟದ ಪದಾಧಿಕಾರಿಯಾದ ವಿಜಯಲಕ್ಷ್ಮೀ ರಾಘವ್, ಒಕ್ಕೂಟದ ಪದಾಧಿಕಾರಿಗಳು ಮತ್ತು ಗ್ರಾಮ ಪಂಚಾಯತ್ ಧರ್ಮಸ್ಥಳ.