ಉಜಿರೆ: ಅನುಗ್ರಹ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಂಘದ ವತಿಯಿಂದ ಕನ್ನಡ ನಾಡು ನುಡಿ ಎಂಬ ಮಾಹಿತಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ನಡ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿಯಾಗಿರುವ ವಸಂತಿ ಇವರು ಆಗಮಿಸಿದ್ದರು.ಇವರು ತಮ್ಮ ಭಾಷಣದಲ್ಲಿ ಕನ್ನಡ ಭಾಷೆಯ ಹಿರಿಮೆ, ಶ್ರೀಮಂತಿಕೆ ಹಾಗೂ ಪದ ಪ್ರಯೋಗದ ಬಗ್ಗೆ ಮಾತನಾಡುತ್ತಾ, ಕನ್ನಡ ಭಾಷೆಯು ಸಂಪದ್ಭರಿತವಾಗಿ, ವೈಜ್ಞಾನಿಕ ಹಾಗೂ ಶಾಸ್ತ್ರೀಯವಾಗಿ ಹೇಗೆ ರೂಪುಗೊಂಡಿದೆ ಎಂಬ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಫಾ.ವಿಜಯ್ ಲೋಬೋ ಇವರು ವಹಿಸಿದರು.ಪ್ರಾಸ್ತವಿಕ ಮಾತುಗಳನ್ನಾಡುತ್ತಾ ಕರ್ನಾಟಕದ ರಾಜ್ಯದ ಹಿನ್ನೆಲೆ, ಹಾಗೂ ವಿಶೇಷತೆಗಳನ್ನು ವರ್ಣಿಸಿದರು.
ವಿದ್ಯಾರ್ಥಿನಿ ಕುಮಾರಿ ಭುವನ ಇವರು ಕನ್ನಡ ನಾಡು ನುಡಿ ಮಾಹಿತಿ ವಿಶೇಷತೆ ಬಗ್ಗೆ ಮಾತನಾಡಿದರು.ಕುಮಾರಿ ಟೀನಾ ಇವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕಿ ಸತ್ಯವತಿ ಇವರು ಸ್ವಾಗತಿಸಿ, ಕುಮಾರಿ ಸಚಿತ ಇವರು ಧನ್ಯವಾದ ಗೈದರು. ಬಹುಮಾನ ವಿತರಣೆ ಹಾಗೂ ಕನ್ನಡದ ಹಿರಿಮೆಯನ್ನು ಸಾರುವ ಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿದೆ.