ಶಾಸಕರ ಮೇಲೆ ಎಫ್‌ಐಆರ್ ಹಾಕುವ ಬದಲು ಬಡವರ ಪರ ನಿಂತು ಕೆಲಸ ಮಾಡಿ: ಪ್ರತಾಪ್ ಸಿಂಹ ನಾಯಕ್- ಪತ್ರಿಕಾಗೋಷ್ಠಿ

0

ಬೆಳ್ತಂಗಡಿ: ಕಳೆಂಜದ ಪ್ರಕರಣದಲ್ಲಿ ಬೆಳ್ತಂಗಡಿ ಕಾಂಗ್ರೆಸ್ ಬಡವರ ಮೇಲೆ ರಾಜಕೀಯ ಮಾಡಿದೆ.ಶಾಸಕರ ವೇಗದ ಅಭಿವೃದ್ಧಿ ಕೆಲಸಗಳನ್ನು ಕಾಣಲು ಆಗಲಿಲ್ಲವೆಂದು ಈ ರೀತಿ ರಾಜಕೀಯ ಮಾಡುತ್ತಿದ್ದೀರಿ.ಬಡವರ ಹೆಸರು ಹೇಳಿ ಆಡಳಿತ ಮಾಡಿದವರು ಕಾಂಗ್ರೆಸಿಗರು.ಅರಣ್ಯ ಇಲಾಖೆ ಸಚಿವರಿಗೆ,ಅಧಿಕಾರಿಗಳಿಗೆ ಒತ್ತಡ ಏರಿದ್ದು ಕಾಂಗ್ರೆಸ್ ಎಂಬುದಕ್ಕೆ ಅರಣ್ಯ ಸಚಿವರ ನಿರ್ಧಾರ ಬದಲಾದಾಗ ತಿಳಿಯುತ್ತದೆ.ಕಾಂಗ್ರೆಸಿಗರೇ ದ್ವೇಷದ ರಾಜಕೀಯ ಬೇಡ, ರಾಜ್ಯದ ಆಡಳಿತ ನಿಮ್ಮದು.ಶಾಸಕರ ಮೇಲೆ ಎಫ್‌ಐಆರ್ ಹಾಕುವ ಬದಲು ಬಡವರ ಪರ ನಿಂತು ಕೆಲಸ ಮಾಡಿ.ಶಾಸಕರ ಮೇಲೆ ಹಾಕಿರುವ ಎಫ್‌ಐಆರ್‌ನ್ನು ಖಂಡಿಸುತ್ತೇನೆ.ತಾನು ಜನಪ್ರತಿನಿಧಿಯಾಗಿದ್ದು ತನ್ನ ಮೇಲೆ ಕೈಯಾಗಿದೆ ನಾನು ಎಫ್‌ಐಆರ್ ಮಾಡಬಹುದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅವರು ಅ.30 ರಂದು ಬೆಳ್ತಂಗಡಿಯ ಪ್ರವಾಸ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಶಾಸಕರನ್ನು ಮುಖ್ಯಂತ್ರಿಗಳು ಬಚ್ಚಾ ಎನ್ನುವುದರಿಂದ ಅವರೇನು ಬಚ್ಚಾ ಆಗಲ್ಲ.ಬರ ಪರಿಹಾರ,ಅಭಿವೃದ್ಧಿ ಕಾರ್ಯಗಳು ಮಾಡಲು ಸಾಧ್ಯವಾಗದೆ ಮುಖ್ಯಮಂತ್ರಿ ಪಟ್ಟಕ್ಕೆ ಕಿತ್ತಾಟ ನಡೆಯುತ್ತಿದೆ.ರಾಜ್ಯದಲ್ಲಿ ಹುಲಿ ಉಗುರು ಪ್ರಕರಣವನ್ನು ಚಾಲ್ತಿಗೆ ತಂದು ಜನರ ಗಮನವನ್ನು ಬೇರೆ ಕಡೆಗೆ ಸೆಳೆಯುವಂತೆ ಮಾಡಿ, ಆಡಳಿತ ಸೋಲನ್ನು ಮುಟ್ಟು ಹಾಕಲು ಪ್ರಯತ್ನಿಸುತ್ತಿದೆ ಎಂದರು.

ಪಶ್ಚಿಮ ಘಟ್ಟ ಹಾಗೂ ಮಲ್ನಾಡು ಪ್ರದೇಶಗಳಲ್ಲಿ ಪಾರಂಪರಿಕವಾಗಿ ಅರಣ್ಯವಾಸಿಗಳು ಹಲವಾರು ತಲೆಮಾರುಗಳಿಂದ ವಾಸಿಸುತ್ತಾ ಬರುತ್ತಿದ್ದಾರೆ.ಈ ಪ್ರದೇಶದಲ್ಲಿ ವಾಸಿಸುತ್ತಿರುವರ ಜನರ ಸಮಸ್ಯೆಗಳನ್ನು ಸರಕಾರ ಗಮನಹರಿಸಬೇಕು.ಜಂಟಿ ಸರ್ವೆ ನಡೆಸಿ ಹಲವಾರು ವರ್ಷಗಳಿಂದ ವಾಸಿಸುತ್ತಿರುವ ಕುಟುಂಬಗಳಿಗೆ ಶಾಶ್ವತ ಪರಿಹಾರ ದೊರಕಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.

ಕಳೆಂಜದಲ್ಲಿ 300ಕ್ಕೂ ಹೆಚ್ಚು ಮನೆಗಳು, ಎರಡು ಶಾಲೆಗಳು ಹಾಗೂ ಅರಸಿನಮಕ್ಕಿ ರಸ್ತೆಯ ಮೇಲ್ಭಾಗದಲ್ಲಿರುವ ಸೊಸೈಟಿ,ಗ್ರಾ.ಪಂ.ಕಟ್ಟಡ ಅರಣ್ಯದಲ್ಲಿವೆ.ಈ ರೀತಿ ಹಲವು ಸಮಸ್ಯೆಗಳಿದ್ದು ಸರಕಾರ ಸರಿಯಾಗಿ ಪ್ರದೇಶ ಗುರುತುವಿಕೆ ಮಾಡದೆ ಅರಣ್ಯ ಎಂದಿರುವುದು ವಿಷಾದನೀಯ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here