ಎಸ್‌ಕೆಎಸ್‌ಎಸ್‌ಎಫ್ ಮದ್ದಡ್ಕ ಶಾಖೆಯ ವತಿಯಿಂದ ಕುವೆಟ್ಟು ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಟೈ, ಬೆಲ್ಟ್ ವಿತರಣೆ

0

ಕುವೆಟ್ಟು: ಎಸ್‌ಕೆಎಸ್‌ಎಸ್‌ಎಫ್ ಮದ್ದಡ್ಕ ಶಾಖೆಯ ವತಿಯಿಂದ ಅ.30 ರಂದು ಸರಕಾರಿ ಕುವೆಟ್ಟು ಶಾಲೆಯ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಟೈ ಮತ್ತು ಬೆಲ್ಟನ್ನು ನೀಡಲಾಯಿತು.

ಈ ಸಂಧರ್ಭದಲ್ಲಿ ಎಸ್‌ಕೆಎಸ್‌ಎಸ್‌ಎಫ್ ಮದ್ದಡ್ಕ ಶಾಖೆಯ ಅಧ್ಯಕ್ಷ ಇಲ್ಯಾಝ್ ಚಿಲಿಂಬಿ, ಉಪಾಧ್ಯಕ್ಷ ಮನ್ಸೂರ್ ಪಾದೆ ಕಾರ್ಯದರ್ಶಿ ಶಾ ಮದ್ದಡ್ಕ, ಕೋಶಾದಿಕಾರಿ ಇಸ್ಮಾಯಿಲ್ ಕಿಂಗ್ ಸ್ಟಾರ್, ಶಾಲಾ ಎಸ್.ಡಿ.ಯಂ.ಸಿ ಅಧ್ಯಕ್ಷ ಸಿರಾಜ್ ಚಿಲಿಂಬಿ, ಶಾಲಾ ಮುಖ್ಯೋಪಾದ್ಯಯ ಬಾಸ್ಕರ್, ಎಸ್.ಡಿ.ಯಂ.ಸಿ ಉಪಾಧ್ಯಕ್ಷೆ ಪ್ರೇಮ ಹಾಗೂ ಸದಸ್ಯರು, ಶಾಲಾ ಮಕ್ಕಳು, ಅಧ್ಯಾಪಕ ವೃಂದ ಪೋಷಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಎಸ್‌ಕೆಎಸ್‌ಎಸ್‌ಎಫ್ ಇದರ ಅಧ್ಯಕ್ಷರಾದ ಇಲ್ಯಾಝ್ ಚಿಲಿಂಬಿಯವರನ್ನು ಗೌರವಿಸಿ ಅಭಿನಂದಿಸಿದರು.

LEAVE A REPLY

Please enter your comment!
Please enter your name here