ಉಜಿರೆ: ಎಸ್.ಡಿ.ಎಂ ಕಾಲೇಜು ಬಳಿ ದ್ವಿಚಕ್ರ ವಾಹನಗಳ ನಡುವೆ ಅಪಘಾತ

0

ಉಜಿರೆ: ಉಜಿರೆ ಎಸ್.ಡಿ.ಎಂ ಕಾಲೇಜು ಬಳಿ ಬೈಕ್ ಮತ್ತು ಸ್ಕೂಟರ್ ‌ನಡುವೆ ಅ.30 ರಂದು ಮಧ್ಯಾಹ್ನ ಅಪಘಾತ ಸಂಭವಿಸಿದೆ.

ಸ್ಕೂಟರ್ ಸವಾರ ಉಜಿರೆಯಿಂದ ಧರ್ಮಸ್ಥಳ ಹೋಗುವ ರಸ್ತೆಯಲ್ಲಿ ಕಾಲೇಜು ರಸ್ತೆಯ ಡಿವೈಡರ್ ಮಧ್ಯೆ ಬಲಕ್ಕೆ ತಿರುಗಿಸುವ ವೇಳೆ ಹಿಂದಿನಿಂದ ಬಂದ ಬೈಕ್ ಸವಾರನು ನಿಯಂತ್ರಣ ತಪ್ಪಿ ಗುದ್ದಿದ ಘಟನೆ ನಡೆದಿದೆ.

ಬೈಕ್ ಸವಾರ ಸ್ವಲ್ಪ ದೂರಕ್ಕೆ ಎಸೆಯಲ್ಪಟ್ಟು ತಲೆಗೆ ಬಲವಾದ ಏಟು ಬಿದ್ದಿದೆ.ಇಬ್ಬರು ಬೈಕು ಸವಾರರನ್ನು ಸ್ಥಳಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

LEAVE A REPLY

Please enter your comment!
Please enter your name here