ನಡ: ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ , ಮತ್ತು ಮನೆ ಮನೆ ಜಾಥಾ ಅಭಿಯಾನದಡಿ ಅ.30ರಂದು ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಡ ಗ್ರಾ.ಪಂ ನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕ್ರಿಯಾ ಯೋಜನೆ ತಯಾರಿ ಬಗ್ಗೆ ವಿಶೇಷ ಗ್ರಾಮ ಸಭೆ ಮತ್ತು ಮನೆ ಮನೆ ಭೇಟಿ ಮಾಡಿ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭ ಗ್ರಾ.ಪಂ ಅಧ್ಯಕ್ಷೆ ಮಂಜುಳ, ಗ್ರಾ.ಪಂ ನ ಸರ್ವಸದಸ್ಯರು, ಪಂ.ಅಭಿವೃದ್ಧಿ ಅಧಿಕಾರಿಗಳಾದ ಶ್ರೀನಿವಾಸ ಡಿ.ಪಿ, ಕಾರ್ಯದರ್ಶಿ ಕಿರಣ್ ಎಮ್, ತಾಲೂಕು ತಾಂತ್ರಿಕ ಸಹಾಯಕ ಅಭಿಯಂತರರು ರೇಷ್ಮಾ ರಾಜ್, ತಾಲೂಕು ನರೇಗಾ ಐಇಸಿ ಸಂಯೋಜಕರು ವಿನಿಷ, ನರೇಗಾ ಸಿಬ್ಬಂದಿ ಮೀನಾಕ್ಷಿ ಕೆ ಉಪಸ್ಥಿತರಿದ್ದರು.
p>