ಉಜಿರೆ: ತಾಲೂಕು ಯುವಜನ ಒಕ್ಕೂಟ (ರಿ) ಬೆಳ್ತಂಗಡಿ ಇದರ ಆಶ್ರಯದಲ್ಲಿ ಶ್ರೀ ಯುವಕ ಮಂಡಲ ಮುಂಡತೋಡಿ ಉಜಿರೆ ಇವರ ಸಾರಥ್ಯದಲ್ಲಿ ತಾಲೂಕಿನ ವಿವಿಧ ಯುವಕ, ಯುವತಿ ಹವ್ಯಾಸ ಮಂಡಲ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು, ದ. ಕ.ಯುವಜನ ಒಕ್ಕೂಟ ಮಂಗಳೂರು ಇದರ ಸಹಕಾರದೊಂದಿಗೆ ಬೆಳ್ತಂಗಡಿ ತಾಲೂಕು ಮಟ್ಟದ ಕೆಸರ್ ದ ಗೊಬ್ಬು ಗ್ರಾಮೀಣ ಕ್ರೀಡಾಕೂಟ ಅ.29ರಂದು ಮುಂಡತೋಡಿ ಚಾವಡಿ ಬೈಲ್ ನಲ್ಲಿ ಜರಗಿತು.
ಬೆಳಿಗ್ಗೆ ಕ್ರೀಡಾಜ್ಯೋತಿ ಭವ್ಯ ಮೆರವಣಿಗೆಯನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಮೋಕ್ತೆಸರ ಯು.ಶರತ್ ಕೃಷ್ಣ ಪಡುವೆನ್ನಾಯ ಉದ್ಘಾಟಿಸಿದರು.
ನಂತರ ಕ್ರೀಡಾಂಗಣವನ್ನು ಉಜಿರೆಯ ದಂತ ವೈದ್ಯ ನಂದಗೋಕುಲ ಗೋ ಶಾಲೆಯ ಅಧ್ಯಕ್ಷ ಡಾ.ಎಂ.ಎಂ.ದಯಾಕರ್ ಹಾಲು ಹಾಕುವ ಮೂಲಕ ಉದ್ಘಾಟಿಸಿದರು.
ಅನಂತ ನಡೆದ ಸಭಾ ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ರಮಾನಂದ ಸಾಲಿಯಾನ್ ಮುಂಡೂರು ವಹಿಸಿದ್ದರು.
ಬಂಟ್ವಾಳ ಪ್ರಾದೇಶಿಕ ಸಾರಿಗೆ ಅಧಿಕಾರಿ ಚರಣ್ ಕೆ., ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ,ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೃಷಿಕೇಶ್ ಧರ್ಮಸ್ಥಳ, ಉಜಿರೆ ಅಮೃತ ಟೆಕ್ಸ್ ಮಾಲಕ ಪ್ರಶಾಂತ್ ಜೈನ್, ತಾಲೂಕು ಯುವಜನ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಕೆ. ಜಿ. ಗೋಖಲೆ ಶಿಶಿಲ, ಉದ್ಯಮಿ ಶಂಕರನಾರಾಯಣ ಭಟ್ ಕಾನುಮನೆ, ಜಿಲ್ಲಾ ಯುವಜನ ಒಕ್ಕೂಟದ ನಿರ್ದೇಶಕ ಚಿದಾನಂದ ಇಡ್ಯಾ, ಜಿಲ್ಲಾ ಗೌರವ ಅಧ್ಯಕ್ಷ ರಾಜೀವ್ ಸಾಲಿಯಾನ್, ತಾಲೂಕು ಯುವಜನ ಒಕ್ಕೂಟದ ಮಾಜಿ ಅಧ್ಯಕ್ಷರುಗಳಾದ ಲೋಕೇಶ್ ಶೆಟ್ಟಿ ಧರ್ಮಸ್ಥಳ, ವಿಠ್ಠಲ ಸಿ.ಪೂಜಾರಿ ಹೊಸಂಗಡಿ, ಕೇಶವ ಗೌಡ ಬೆಳಾಲು, ಜಿ.ಪ.ಮಾಜಿ ಸದಸ್ಯೆ ಸಿ.ಕೆ.ಚಂದ್ರಕಲಾ, ಪತ್ರಕರ್ತ ಮನೋಹರ ಬಳಂಜ, ರಂಜಿತ್ ಇಂಡಸ್ಟ್ರಿ ಮಾಲಾಕ ದಿನೇಶ್ ಪೂಜಾರಿ, ಸಂತೋಷ ಮೆನನ್, ಶ್ರೀ ಯುವಕ ಮಂಡಲದ ಅಧ್ಯಕ್ಷ ರಜನೀಶ್ಕಾರ್ಯದರ್ಶಿ ಸುರೇಶ ಎಂ. ಕ್ರೀಡಾ ಕಾರ್ಯದರ್ಶಿ ಅನ್ವಿತ್, ಕ್ರೀಡಾ ನಿರ್ದೇಶಕ ರಜತ್ ಬಿ. ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಲೂಕು ಯುವಜನ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸದಾಶಿವ ಹೆಗ್ಡೆ ಸಾವ್ಯ ಸ್ವಾಗತಿಸಿದರು.ಜಿಲ್ಲಾ ಯುವಜನ ಒಕ್ಕೂಟದ ಗೌರವ ಅಧ್ಯಕ್ಷ ರಾಜೀವ್ ಸಾಲಿಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಚಂದ್ರಹಾಸ್ ಬಳಂಜ ಮತ್ತು ಪ್ರಜ್ಞಾ ಓಡಿಲ್ನಾಳ ನಿರೂಪಿಸಿದರು.
ಇದೆ ಸಂದರ್ಭದಲ್ಲಿ ರಾಷ್ಟ್ರ ಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರನ್ನು ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ಪ್ರಶಾಂತ್ ಇವರನ್ನು ಸನ್ಮಾನಿಸಲಾಯಿತು.
ತಾಲೂಕಿನ ವಿವಿಧ ಯುವಕ, ಯುವತಿ ಮಂಡಲದ ಪದಾಧಿಕಾರಿಗಳು, ಸದಸ್ಯರು, ಶ್ರೀ ಯುವಕ ಮಂಡಲದ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.ಅನಂತರ ವಿವಿಧ ಕ್ರೀಡಾ ಸ್ಪರ್ಧೆಗಳು ಜರಗಿತು.