ಅರಸಿನಮಕ್ಕಿಯಲ್ಲಿ 43ನೇ ವರ್ಷದ ಶಾರದಾ ಉತ್ಸವ

0

ಅರಸಿನಮಕ್ಕಿ: ಅ.24ರಂದು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಟ್ರಸ್ಟ್ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹತ್ಯಡ್ಕ ಇದರ ಸಹಕಾರದೊಂದಿಗೆ 43ನೇ ವರ್ಷದ ಶಾರದಾ ಉತ್ಸವ ಗೋಪಾಲ ಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೆರವೇರಿತು.

ಬೆಳಿಗ್ಗೆ 8.30 ಕ್ಕೆ ಶಾರದಾ ಮೂರ್ತಿ ಪ್ರತಿಷ್ಠೆ,9ಗಂಟೆಯಿಂದ ವಿವಿಧ ಭಜನಾ ಮಂಡಳಿ ತಂಡದಿಂದ ಭಜನೆ, ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ನಂತರ ಭೋಜನ ಪ್ರಸಾದವನ್ನು ಭಕ್ತಾದಿಗಳು ಸ್ವೀಕರಿಸಿದರು.

ಸಂಜೆ 3.30ಕ್ಕೆ ಶೋಭಾಯಾತ್ರೆ ಶಾಲೆಯಿಂದ ಹೊರಟು ಉಪ್ಪರಡ್ಕ ದೈವಸ್ಥಾನ ತನಕ ಸಾಗಿ ಹಿಂತಿರುಗಿ ಅರಸಿನಮಕ್ಕಿ ಕಪಿಲಾನದಿ ತನಕ ಸಾಗಿ ಶೋಭಾಯಾತ್ರೆ ವಿಸರ್ಜನೆ ನಡೆಯಿತು.

ಭಜನಾ ಮಂಡಳಿಯ ಅಧ್ಯಕ್ಷರಾದ ಯು.ಎ ನಾರಾಯಣ ಗೌಡ ಉಡ್ಯೆರೆ, ಕಾರ್ಯದರ್ಶಿಯಾದ ಸತೀಶ್ ಶೆಟ್ಟಿ ಗುತ್ತು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here