ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಾಲೋಚನಾ ಸಭೆ

0

ಅರಸಿನಮಕ್ಕಿ: ಸಂಪೂರ್ಣವಾಗಿ ಶಿಲಾಮಯವಾಗಿ ನಿರ್ಮಾಣಗೊಂಡಿರುವ ಹತ್ಯಡ್ಕ ಗ್ರಾಮದ ಅರಸಿನಮಕ್ಕಿ ಬಳಿಯ ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಾಲೋಚನಾ ಸಭೆಯು ಅ.23ರ೦ದು ಅರಿಕೆಗುಡ್ಡೆಯಲ್ಲಿ ನಡೆಯಿತು.

ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಪಿಲಿಕ್ಕಬೆಯವರು ಅಧ್ಯಕ್ಷತೆ ವಹಿಸಿ ಭಕ್ತರ ಸಹಕಾರದಿಂದ ಕ್ಷೇತ್ರದಲ್ಲಿ ಅತ್ಯಲ್ಪ ಅವಧಿಯಲ್ಲಿ ನಡೆದಿರುವ ಕೆಲಸ ಕಾರ್ಯಗಳ ಬಗ್ಗೆ, ಇನ್ನು ನಡೆಯಬೇಕಿರುವ ಕಾಮಗಾರಿಗಳ ಬಗ್ಗೆ ತಿಳಿಸಿ ಬ್ರಹ್ಮಕಲಶೋತ್ಸವ ನಡೆಸುವ ಬಗ್ಗೆ ಮಾಹಿತಿ ನೀಡಿ ಸಹಕಾರ ಯಾಚಿಸಿದರು.

ಸಭೆಯಲ್ಲಿ ಮಾರ್ಗದರ್ಶನ ನೀಡಿದ ಜಯರಾಮ ನೆಲ್ಲಿತ್ತಾಯರವರು ಶ್ರೀ ವನದುರ್ಗೆಯೇ ಭಕ್ತರಿಂದ ಎಲ್ಲ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾಳೆ. ಹೊಸ ದೇವಾಲಯ ನಿರ್ಮಾಣವೆಂದರೆ ಅದು ಇತಿಹಾಸ ನಿರ್ಮಾಣದ ಕೆಲಸ.ಈ ಮಾತು ಇಲ್ಲಿ ಅಕ್ಷರಶಹ ನಿಜವಾಗಿದೆ.ಮುಂದಿನ ದಿನಗಳಲ್ಲಿ ಬ್ರಹ್ಮಕಲಶೋತ್ಸವ ಯಶಸ್ವಿಯಾಗಲು ಎಲ್ಲರೂ ಎಲ್ಲರೂ ಚುರುಕಿನಿಂದ ತೊಡಗಿಕೊಳ್ಳಬೇಕು ಎಂದು ಸಲಹೆ ಎಂದು ಸಲಹೆ ನೀಡಿದರು.

ವಾಮನ ತಾಮ್ಹನ್ ಕರ್ ರವರು ಮಾತನಾಡಿ, ಸಮರ್ಪಣಾ ಮನೋಭಾವದಿಂದ ಎಲ್ಲರೂ ಕೆಲಸ ಮಾಡಿದಲ್ಲಿ ಯಶಸ್ವಿಯಾಗಿ ಬ್ರಹ್ಮಕಲಶೋತ್ಸವ ನಡೆಸಲು ಸಾಧ್ಯ.ಈ ಸುಂದರ ದೇಗುಲದ ಬ್ರಹ್ಮಕಲಶೋತ್ಸವದಲ್ಲಿ ಪಾಲು ಪಡೆಯುತ್ತಿರುವುದು ನಮ್ಮ ಸೌಭಾಗ್ಯ ಎಂದರು.ಅಧ್ಯಕ್ಷರಾದ ಶ್ರೀರಂಗ ದಾಮಲೆಯವರು ಎಲ್ಲರ ಸಹಕಾರಕ್ಕಾಗಿ ವಿನಂತಿಸಿದರು.

ಕಾರ್ಯಕ್ರಮದಲ್ಲಿ ಆಡಳಿತ ಸಮಿತಿ ಅಧ್ಯಕ್ಷರಾದ ಪದ್ಮಯ ಬಾರಿಗ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುಧೀರ್ ಕುಮಾರ್ ಎಂ.ಎಸ್, ಮಂಜುಳಾ ಕಾರಂತ್, ಮೋಹನ ಉಪಾಧ್ಯಯ, ಶ್ರೀಕರ ಭಿಡೆ, ತುಂಗ ಗೌಡ, ಊರಿನ ಅನೇಕ ಗಣ್ಯರು, ಆಡಳಿತ, ಜೀರ್ಣೋದ್ದಾರ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಆಗಮಿಸಿದ ಎಲ್ಲರನ್ನು ಸಮಿತಿಯ ಸದಸ್ಯರುಗಳನ್ನಾಗಿ ಆಯ್ಕೆ ಮಾಡಲಾಯಿತು.ಮುರಳೀಧರ ಶೆಟ್ಟಿಗಾರ್ ಸ್ವಾಗತಿಸಿ, ಕೇಶವ ರಾವ್ ನೆಕ್ಕಿಲ್ ವಂದಿಸಿದರು.ಆಸುಪಾಸಿನ ಗ್ರಾಮಗಳ ಧಾರ್ಮಿಕ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರನ್ನು ಕರೆದು ನವೆಂಬರ್ 5ರಂದು ಬೆಳಗ್ಗೆ 10 ಗಂಟೆಗೆ ಅರಿಕೆಗುಡ್ಡೆಯಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲು ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಶ್ರೀರಂಗ ದಾಮಲೆ, ಕಾರ್ಯದರ್ಶಿಯಾಗಿ ಮುರಳೀಧರ ಶೆಟ್ಟಿಗಾರ್‌, ಸಹ ಕಾರ್ಯದರ್ಶಿಯಾಗಿ ನೀತಾ ಕಲ್ಲಕೋಟೆ, ಕೋಶಾಧಿಕಾರಿಯಾಗಿ ಕೇಶವ ರಾವ್ ನೆಕ್ಕಿಲು, ಉಪಾಧ್ಯಕ್ಷರುಗಳಾಗಿ ಅಣ್ಣು ಗೌಡ ನಾವಳೆ, ನಾರಾಯಣ ಗೌಡ ಬರಮೇಲು, ರಾಮಕೃಷ್ಣ ಶೆಟ್ಟಿಗಾರ್‌ ಪಾಲೆಂಜ, ವಿಶ್ವನಾಥ ಆಚಾರ್ಯ ಸಂಕೇಶ, ಬಾಲಕೃಷ್ಣ ಶೆಟ್ಟಿ ಮುದ್ದಿಗೆ, ದಿನೇಶ್ ಕುಂಟಾಲಪಳಿಕೆ ಇವರುಗಳನ್ನು ಆಯ್ಕೆ ಮಾಡಲಾಯಿತು.

p>

LEAVE A REPLY

Please enter your comment!
Please enter your name here