ಅ.29: ಉಜಿರೆ ಮುಂಡತ್ತೋಡಿ ಚಾವಡಿ ಬೈಲಿನಲ್ಲಿ ಕೆಸರ್‍ದ ಗೊಬ್ಬು

0

ಬೆಳ್ತಂಗಡಿ: ಯುವಜನ ಒಕ್ಕೂಟ ಬೆಳ್ತಂಗಡಿ ಇದರ ಆಶ್ರಯದಲ್ಲಿ ಶ್ರೀ ಯುವಕ ಮಂಡಲ ಮುಂಡತ್ತೋಡಿ ಉಜಿರೆ ಇದರ ಸಾರಥ್ಯದಲ್ಲಿ ತಾಲೂಕಿನ ಯುವಕ-ಯುವತಿ ಹವ್ಯಾಸಿ ಮಂಡಲ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು, ದ.ಕ ಜಿಲ್ಲಾ ಯುವಜನ ಒಕ್ಕೂಟ ಮಂಗಳೂರು ಸಹಕಾರದೊಂದಿಗೆ ಬೆಳ್ತಂಗಡಿ ತಾಲೂಕು ಮಟ್ಟದ ಕೆಸರ್‍ದ ಗೊಬ್ಬು ಗ್ರಾಮೀಣ ಸೊಗಡಿನ ಕ್ರೀಡಾ ಕೂಟವು ಅ.29ರಂದು ಉಜಿರೆ ಚಾವಡಿ ಬೈಲು ಮುಂಡತ್ತೋಡಿಯಲ್ಲಿ ನಡೆಯಲಿದೆ.

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ತಾಲೂಕಿನ ಶಾಸಕ ಹರೀಶ್ ಪೂಂಜಾ ನೆರವೇರಿಸಲಿದ್ದಾರೆ.ಕ್ರೀಡಾ ಜ್ಯೋತಿ ಭವ್ಯ ಮೆರವಣಿಗೆಯ ಉದ್ಘಾಟನೆ ಶರತ್ ಕೃಷ್ಣಪಡ್ವೆಟ್ನಾಯರು ಅನುವಂಶಿಕ ಆಡಳಿತ ಮೊಕ್ತೇಸರರು ಶ್ರೀ ಜನಾರ್ಧನ ದೇವಸ್ಥಾನ ಉಜಿರೆ ನೆರವೇರಿಸಲಿದ್ದಾರೆ.ಕ್ರೀಡಾಕೂಟದ ಕ್ರೀಡಾಂಗಣದ ಉದ್ಘಾಟನೆಯನ್ನು ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ನೆರವೇರಿಸಲಿದ್ದಾರೆ.ಅಧ್ಯಕ್ಷತೆಯನ್ನು ಯುವಜನ ಒಕ್ಕೂಟದ ಅಧ್ಯಕ್ಷ ರಮಾನಂದ ಸಾಲಿಯಾನ್ ವಹಿಸಲಿದ್ದಾರೆ.

ಮುಖ್ಯಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಉಜಿರೆ ಲಕ್ಷ್ಮೀ ಗ್ರೂಪ್ಸ್ ಮಾಲಕ ಕೆ.ಮೋಹನ್ ಕುಮಾರ್, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಾರಂತ್ ಹಾಗೂ ಮಾಜಿ ಶಾಸಕರುಗಳು, ರಾಜಕೀಯ ಪಕ್ಷಗಳ ಮುಖಂಡರು, ದಾನಿಗಳು ಭಾಗವಹಿಸಲಿದ್ದಾರೆ.

ತಾಲೂಕಿನ 81 ಗ್ರಾಮಗಳಿಂದ ಸುಮಾರು 35ಕ್ಕಿಂತಲೂ ಹೆಚ್ಚು ಸಂಘಟನೆಗಳಿಂದ ಸ್ಪರ್ಧಾರ್ಥಿಗಳು ಭಾಗವಹಿಸಲಿದ್ದಾರೆ. ತಾಲೂಕಿನ ಬೇರೆ ಬೇರೆ ಕಡೆಗಳಿಂದ ಆಗಮಿಸುವ ಯುವಕ ಮತ್ತು ಯುವತಿ ಮಂಡಲದ ಸದಸ್ಯರಿಗೆ ಸ್ಪರ್ಧೆ ನಡೆಯಲಿದ್ದು ಹಗ್ಗಜಗ್ಗಾಟ, ವಾಲಿಬಾಲ್, ರಿಲೇ ಓಟ, ಉಪ್ಪು ಮುಡಿ, ಮಡಕೆ ಒಡೆಯುವುದು, ಯುವತಿಯರಿಗೆ ಹಗ್ಗ ಜಗ್ಗಾಟ, ತ್ರೋಬಾಲ್, ಗೂಟ ಸುತ್ತುವ ಸ್ಪರ್ಧೆ ಮತ್ತು ಯುವಕ ಯುವತಿಯರಿಗೆ ನಿಧಿ ಶೋಧನೆ ಕ್ರೀಡಾಕೂಟದಲ್ಲಿ ಸ್ಥಳೀಯ ಮಕ್ಕಳಿಗೆ ಸ್ಪರ್ಧೆಗಳು ನಡೆಯಲಿದೆ.

ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಯುವಕ ಮಂಡಲ ಮುಂಡತ್ತೋಡಿ ಅಧ್ಯಕ್ಷ ರಜನೀಶ್ ವಹಿಸಲಿದ್ದಾರೆ.ಬೆಳ್ತಂಗಡಿ ಬೆಸ್ಟ್ ಪೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ಬಹುಮಾನ ವಿತರಣೆ ಮಾಡಲಿದ್ದಾರೆ.

ನಂತರ ಸ್ಥಳೀಯ ಮಕ್ಕಳಿಂದ ಮತ್ತು ಬೆದ್ರ ಕಲಾವಿದೆರ್ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಯುವಜನ ಒಕ್ಕೂಟದ ಅಧ್ಯಕ್ಷ ರಮಾನಂದ ಸಾಲಿಯಾನ್ ಮತ್ತು ಶ್ರೀ ಯುವಕ ಮಂಡಲ ಅಧ್ಯಕ್ಷ ರಜನೀಶ್ ತಿಳಿಸಿದ್ದಾರೆ.

p>

LEAVE A REPLY

Please enter your comment!
Please enter your name here