ವಿಶಾಲ್ ಸೇವಾ ಟ್ರಸ್ಟ್ ಉದ್ಘಾಟನೆ

0

ಉಜಿರೆ: ಹಲಕ್ಕೆ ಮನೆಯ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಕ ವಲೇರಿಯನ್ ಡಿಸೋಜಾ ಪ್ರಾರಂಭಿಸಿದ ವಿಶಾಲ್ ಸೇವಾ ಟ್ರಸ್ಟ್ ಅ.22ರಂದು ಉದ್ಘಾಟನೆ ನಡೆಯಿತು.

ಇದರ ಪ್ರಥಮ ಸೇವಾರ್ಥವಾಗಿ ಉಜಿರೆ ಸಂತ ಅಂತೋನಿ ಚರ್ಚ್ ನ ದಯಾಳ್ ಭಾಗ್ ಅಸ್ಸಿಸಿ ವಾಳೆಯ ಫ್ರಾನ್ಸಿಸ್ ಡಿಸೋಜಾ ದಂಪತಿಗೆ ನೂತನ ಗೃಹ ನಿರ್ಮಾಣಕ್ಕೆ ರೂ.25ಸಾವಿರ ಚೆಕ್ ಹಸ್ತಾಂತರ ಮೂಲಕ ಉದ್ಘಾಟನೆಗೊಂಡಿತು.

ಈ ಸಂದರ್ಭದಲ್ಲಿ ವಿಶಾಲ್ ಸೇವಾ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ವಲೇರಿಯನ್ ಡಿಸೋಜಾ, ಟ್ರಸ್ಟಿ ಗಳಾದ ಪ್ಲೋರಿನ್ ಡಿಸೋಜಾ, ವಿಶಾಂತ್ ಡಿಸೋಜಾ, ವಿಶಾಲ್ ಡಿಸೋಜಾ, ಉಜಿರೆ ಸಂತ ಅಂತೋನಿ ಚರ್ಚ್ ಧರ್ಮಗುರು ವ. ಫಾ. ಜೇಮ್ಸ್ ಡಿಸೋಜಾ, ಅನುಗ್ರಹ ಪದವಿ ಪೂರ್ವ ಕೋಲೆಜ್ ಪ್ರಾಂಶುಪಾಲ ವ. ವಿಜಯ್ ಲೋಬೊ, ಧರ್ಮ ಭಗಿನಿ ಸಿ| ವಲ್ಸ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್, ಸಮುದಾಯ ಸಂಚಾಲಕ ರೋಷನ್ ಡಿಸೋಜಾ, ಆಯೋಗದ ಸಂಚಾಲಕಿ ಲವೀನಾ ಫೆರ್ನಾಂಡಿಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here