ಉಜಿರೆ: ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ಅ.22ರಂದು ಮಿಷನ್ ಸಂಡೆ ಆಚರಿಸಲಾಯಿತು.ದೇವರದು ದೇವರಿಗೆ, ಪರರದ್ದು ಪರರಿಗೆ ಎಂಬ ದ್ಯೇಯ ವಾಖ್ಯದೊಂದಿಗೆ ಆಚರಿಸುವ ಸಂಡೆ ಮಿಷನ್ ಸಂಡೆ. ಎಲ್ಲಾ ಭಕ್ತರು ಕುಟುಂಬಕ್ಕೆ ಒಂದ್ದು ಕರಡಿಗೆ ಹಂಚಲಾಗುತ್ತದೆ.ಅದರಲ್ಲಿ ಬಂದ ಮೊತ್ತ ಮತ್ತು ಮಿಷನ್ ಸಂಡೆ ದಿನ ತಮ್ಮ ತಮ್ಮ ಮನೆಯಲ್ಲಿ ಬೆಳೆಸಿದ ತರಕಾರಿ, ಹಣ್ಣು ಹಂಪಲು, ವಸ್ತು ಗಳು, ಎಲ್ಲಾವನ್ನು ತಂದು ದೇವರಿಗೆ ಕಾಣಿಕೆಯನ್ನು ಅರ್ಪಿಸುತ್ತಾರೆ. ಅದನ್ನು ಪೂಜೆ ಬಳಿಕ ಏಲಂ ಮಾಡಲಾಗುವುದು. ಅದರಿಂದ ಸಂಗ್ರಹವಾದ ಮೊತ್ತವನ್ನು ಮಂಗಳೂರು ಧರ್ಮ ಪ್ರಾಂತ್ಯಕ್ಕೆ ಕಳುಹಿಸಿ ಕೊಡಲಾಗುತ್ತದೆ. ಆ ಮೊತ್ತದಲ್ಲಿ ಅಗತ್ಯ ಹುಳ್ಳವರಿಗೆ ಧರ್ಮ ಪ್ರಾಂತ್ಯದಲ್ಲಿ ಹಂಚಲಾಗುತ್ತದೆ.
ಈ ಸಂದರ್ಭದಲ್ಲಿ ಉಜಿರೆ ಚರ್ಚ್ ಧರ್ಮ ಗುರು ವ.ಫಾ ಜೇಮ್ಸ್ ಡಿಸೋಜಾ, ಅನುಗ್ರಹ ಪದವಿ ಪೂರ್ವ ಕೊಲೆಜಿನ ಪ್ರಾಂಶುಪಾಲ ವ.ವಿಜಯ್ ಲೋಬೊ, ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್, ಆಯೋಗದ ಸಂಚಾಲಕ ವಿಲಿಯಮ್ ಡಿಸೋಜಾ, ರೋಷನ್ ಡಿಸೋಜಾ, ಅರುಣ್ ರೆಬೆಲ್ಲೊ, ಪ್ರವೀಣ್ ಡಿಸೋಜಾ, ನಿತಿನ್ ಮೋನಿಸ್, ಲ್ಯಾನ್ಸಿ ಮೋನಿಸ್, ಪ್ರವೀಣ್ ರೊಡ್ರಿಗಸ್, ಸ್ಟೇನಿ ಪಿಂಟೊ ಮೊದಲಾದವರು ಸಹಕರಿಸಿದರು.