ಬೆಳ್ತಂಗಡಿ ಹಾಗೂ ಬಂಗಾಡಿ ವಲಯ ಮಟ್ಟದ ಪ್ರಾಥಮಿಕ ಶಾಲಾ ಬಾಲಕ-ಬಾಲಕಿಯರ ಕ್ರೀಡಾಕೂಟ- ಹೋಲಿ ರಿಡೀಮರ್ ಶಾಲಾ ವಿದ್ಯಾರ್ಥಿಗಳಿಗೆ ಹಲವು ಬಹುಮಾನ

0

ಬೆಳ್ತಂಗಡಿ: ಉಜಿರೆಯ ಶ್ರೀ ರತ್ನವರ್ಮ ಕ್ರೀಡಾಂಗಣದಲ್ಲಿ ಅಕ್ಟೋಬರ್ 6 ರಂದು ನಡೆದ ಬೆಳ್ತಂಗಡಿ ಹಾಗೂ ಬಂಗಾಡಿ ವಲಯ ಮಟ್ಟದ ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ಬೆಳ್ತಂಗಡಿ ಹೋಲಿ ರಿಡೀಮರ್ ಶಾಲಾ ವಿದ್ಯಾರ್ಥಿಗಳು ಹಲವು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.

ಆಲ್ಸ್ಟನ್ ಡಿಸೋಜ (8ನೇ) 200ಮೀ ಓಟದಲ್ಲಿ ಪ್ರಥಮ, 400ಮೀ ಓಟದಲ್ಲಿ ಪ್ರಥಮ ಮತ್ತು 600 ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್ ಆಗಿ ಮಿಂಚಿದ್ದಾರೆ. ಮನ್ವಿತ್ (7ನೇ) ಗುಂಡೆಸೆತ ಪ್ರಥಮ ಸ್ಥಾನ ಹಾಗೂ ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ, ಶ್ರೇಯಸ್ (7ನೇ) 600ಮೀ ಮತ್ತು 400ಮೀ ಓಟದಲ್ಲಿ ದ್ವಿತೀಯ ಸ್ಥಾನ, ವೀವನ್ ಡಿಸೋಜ (8ನೇ) 600ಮೀ ಓಟದಲ್ಲಿ ತೃತೀಯ ಸ್ಥಾನ, ಅನನ್ಯ(7ನೇ) ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಆಲ್ಸ್ಟನ್ ಡಿಸೋಜ (8ನೇ), ವೀವನ್ ಡಿಸೋಜ (8ನೇ), ರೆಹಾಂತ್ (8ನೇ), ಹಾಗೂ ಪ್ರಜ್ವಲ್ (8ನೇ) ರಿಲೇಯಲ್ಲಿ ಪ್ರಥಮ ಸ್ಥಾನ ಮತ್ತು ಅಭೀಶ್ (7ನೇ), ಅರ್ವಿನ್ (7ನೇ), ಸನತ್ (7ನೇ) ಹಾಗೂ ಶ್ರೇಯಸ್ (7ನೇ) ಪ್ರಾಥಮಿಕ ವಿಭಾಗದ ರಿಲೇಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಶರತ್ ಸಂತೋಷ್ ಪಿಂಟೋ ತರಬೇತಿ ನೀಡಿರುತ್ತಾರೆ.ಶಾಲಾ ಸಂಚಾಲಕರಾದ ಅತೀ ವಂ ಫಾ ವಾಲ್ಟರ್ ಡಿಮೆಲ್ಲೋ ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ ವಂ ಫಾ ಕ್ಲಿಫರ್ಡ್ ಪಿಂಟೋರವರು ಸಹಕರಿಸಿದರು.

LEAVE A REPLY

Please enter your comment!
Please enter your name here