ವಲಯ ಮಟ್ಟದ ಕ್ರೀಡಾಕೂಟ: ಮರಿಯಾಂಬಿಕ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

0

ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ಅ.6ರಂದು ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ 14ರ ವಯೋಮಿತಿಯ ಬಾಲಕ/ಬಾಲಕಿಯರ ಕ್ರೀಡಾಕೂಟದಲ್ಲಿ ಮರಿಯಾoಬಿಕ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಪ್ರೌಢಶಾಲಾ ಬಾಲಕರ ವಿಭಾಗದ ಗುಂಡು ಎಸೆತದಲ್ಲಿ ಹೃತಿಕ್ (8ನೇ) ಪ್ರಥಮ ಸ್ಥಾನ, ಹೇಮಂತ್ (8ನೇ) ದ್ವಿತೀಯ ಸ್ಥಾನ, ಚಕ್ರ ಎಸೆತದಲ್ಲಿ ಹೇಮಂತ್ (8ನೇ) ಪ್ರಥಮ ಸ್ಥಾನ, ಮೊಹಮ್ಮದ್ ಇಶಾಮ್ (8ನೇ) ದ್ವಿತೀಯ ಸ್ಥಾನ ಹಾಗೂ ಪ್ರೌಢಶಾಲಾ ಬಾಲಕಿಯರ ವಿಭಾಗದ ಚಕ್ರ ಎಸೆತದಲ್ಲಿ ಆಯಿಷ ಶಜ್ಮಾ (8ನೇ) ಪ್ರಥಮ ಸ್ಥಾನ, ಎತ್ತರ ಜಿಗಿತದಲ್ಲಿ ಆಯಿಷತ್ ಆಫಿಯ (8ನೇ) ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

ಪ್ರಾಥಮಿಕ ಶಾಲಾ ಬಾಲಕರ ವಿಭಾಗದ ಚಕ್ರ ಎಸೆತದಲ್ಲಿ ರೆಲ್ಸನ್ ಜಾರ್ಜ್ (7ನೇ) ಪ್ರಥಮ ಸ್ಥಾನ, ಎತ್ತರ ಜಿಗಿತದಲ್ಲಿ ರಿಸ್ಟನ್ ಲೋಬೊ (7ನೇ) ದ್ವಿತೀಯ ಸ್ಥಾನ, ರಿಲೇ ಯಲ್ಲಿ ಮೊಹಮ್ಮದ್ ಹರ್ಷ್ (7ನೇ), ಪ್ರಣೀಶ್ (7ನೇ), ಮೊಹಮ್ಮದ್ ಸಫ್ವಾನ್ (7ನೇ), ಮೊಹಮ್ಮದ್ ಮುಝಮ್ಮಿಲ್ (6ನೇ) ದ್ವಿತೀಯ ಸ್ಥಾನವನ್ನು ಹಾಗೂ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದ ಎತ್ತರ ಜಿಗಿತದಲ್ಲಿ ಸಾನ್ವಿ (7ನೇ) ಪ್ರಥಮ ಸ್ಥಾನ ಗುಂಡು ಎಸೆತದಲ್ಲಿ ಕ್ಷಮಿಕ (6ನೇ) ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

ದೈಹಿಕ ಶಿಕ್ಷಣ ಶಿಕ್ಷಕರಾದ ಕಿಶನ್ ರಾಜ್ ರೈ ತರಬೇತಿ ನೀಡಿದ್ದು, ಶಾಲಾ ಸಂಚಾಲಕರಾದ ಫಾ. ಸೆಬಾಸ್ಟಿನ್, ಮುಖ್ಯ ಶಿಕ್ಷಕಿ ಸಿಸ್ಟರ್ ಶೆರಿನ್ ಹಾಗೂ ಸಿಬ್ಬಂದಿ ವರ್ಗ ಸಹಕರಿಸಿದ್ದಾರೆ.

LEAVE A REPLY

Please enter your comment!
Please enter your name here