


ಬೆಳ್ತಂಗಡಿ: ಲಯನ್ಸ್ ಕ್ಲಬ್ ಬೆಳ್ತಂಗಡಿಯ ಪ್ರಾಯೋಜಕತ್ವದಲ್ಲಿ ಪ್ರಾಂತ್ಯ-12 ರಲ್ಲಿ ವಲಯ-2 ರ ಝೋನ್ ಮಟ್ಟದ ಲಯನ್ಸ್ ಕ್ಲಬ್‌ಗಳ ಪಿಎಸ್‌ಟಿ ಸೆಮಿನಾರ್ ಲಯನ್ಸ್ ಭವನ ಬೆಳ್ತಂಗಡಿಯಲ್ಲಿ ಜರುಗಿತು.
ಜಿಲ್ಲಾ ಜಿಎಸ್‌ಟಿ ಕಾರ್ಡಿನೇಟರ್ ಲ.ಜಗದೀಶ್ ಎಡಪಡಿತ್ತಾಯ, ಅಸೋಸಿಯೇಟ್ ಕೋರ್ಡಿನೇಟರ್ ಲ.ನಿತ್ಯಾನಂದ ನಾವರ, ಜಿಎಂಟಿ ಅಸೋಸಿಯೇಟ್ ಕೋರ್ಡಿನೇಟರ್ ಲ.ರಾಜು ಶೆಟ್ಟಿ ಬೆಂಗೆತ್ಯಾರು, ಜಿಎಲ್‌ಟಿ ಅಸೋಸಿಯೇಟೆಡ್ ಕೋರ್ಡಿನೇಟರ್ ಲ.ಧರಣೇಂದ್ರ ಕೆ ಜೈನ್, ಜಿಇಟಿ ಕೋರ್ಡಿನೇಟರ್ ಲ.ವಸಂತ ಶೆಟ್ಟಿ,ಡಿ ಜಿ ಪ್ರೋಗ್ರಾಂ ಬಗ್ಗೆ ಲ.ಶಿವಪ್ರಸಾದ್ ಹೆಗ್ಡೆ ಇವರುಗಳು ತರಬೇತಿ ನೀಡಿದರು.


ಮೂಡುಬಿದಿರೆ, ವೇಣೂರು, ಸುಲ್ಕೇರಿ ಹಾಗೂ ಬೆಳ್ತಂಗಡಿ ಲಯನ್ಸ್ ಕ್ಲಬ್ ಗಳ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿಗಳು ಹಾಜರಿದ್ದರು.
ವಲಯಾಧ್ಯಕ್ಷ ಲ.ದಿನೇಶ್ ಎಂ.ಕೆ ರವರು ಪ್ರಮಾಣ ಪತ್ರ ವಿತರಿಸಿದರು.ಬೆಳ್ತಂಗಡಿ ಸುವರ್ಣ ವರ್ಷದ ಲಯನ್ಸ್ ಅಧ್ಯಕ್ಷ ಲ.ಉಮೇಶ್ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಲ.ಅನಂತಕೃಷ್ಣ ಧನ್ಯವಾದವಿತ್ತರು. ಲ.ಧರಣೇಂದ್ರ ಕೆ ಜೈನ್ ನಿರೂಪಿಸಿದರು.









