

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಸಾಧನೆಗಳ ಕುರಿತಾಗಿ ‘ಕುಡುಮ ರತ್ನ’ ಶೀರ್ಷಿಕೆಯ ಹೊತ್ತಗೆ ಹಾಗೂ ಲೋಕದ ಆಗುಹೋಗುಗಳ ಬಗ್ಗೆ ‘ಲೋಕಾಭಿರಾಮ’ ಕೃತಿ ಇತ್ತೀಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಅನಾವರಣಗೊಳಿಸಿದರು.

ಸರ್ವಜ್ಞನ ತ್ರಿಪದಿಗಳ ರೀತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಡಿ. ವೀರೇಂದ್ರ ಹೆಗ್ಗಡೆಯವರ ಸಾಧನೆಗಳನ್ನು ತ್ರಿಪದಿಗಳ ಮೂಲಕ ಈ ಕುಡುಮ ರತ್ನ ಹೊತ್ತಗೆಯಲ್ಲಿ ಪ್ರಸ್ತುತ ಪಡಿಸಲಾಗಿದೆ.ಲೋಕಾಭಿರಾಮ ಕೃತಿಯಲ್ಲಿ ಸಮಾಜದ ಆಗು-ಹೋಗುಗಳನ್ನು ತ್ರಿಪದಿ ಮೂಲಕ ವರ್ಣಿಸಲಾಗಿದೆ.
ಕೃತಿಯ ಲೇಖಕ ಬೆಳ್ತಂಗಡಿ ತಾಲೂಕಿನ ಚರ್ಚ್ ಶಾಲೆಯ ಶಿಕ್ಷಕ ಮಂಜುನಾಥ್ ಭಟ್ ಅಂತರ, ಅಳದಂಗಡಿ ಅರಮನೆಯ ಚಾವಡಿ ನಾಯಕರಾದ ರಾಜಶೇಖರ್ ಶೆಟ್ಟಿ, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಕೃತಿ ಬಿಡುಗಡೆ ವೇಳೆ ಉಪಸ್ಥಿತರಿದ್ದರು.