ಬೆಳ್ತಂಗಡಿ : ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಮಹಾಸಭೆಯು ಸೆ. 24ರಂದು ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಗಳ ಸಭಾಭವನದಲ್ಲಿ ಜರಗಿತು.
ಸಂಘದ ಅಧ್ಯಕ್ಷ ಹೆಚ್ ಪದ್ಮಗೌಡ ಅವರ ಅಧ್ಯಕ್ಷತೆ ವಹಿಸಿ ಮಾತನಾಡಿ 2022 -23 ನೇ ಸಾಲಿನ ವಾರ್ಷಿಕದಲ್ಲಿ ರೂ. 5.35 ಕೋಟಿ ವ್ಯವಹಾರ ನಡೆಸಿ 27.92 ಲಕ್ಷ ಲಾಭ ಗಳಿಸಿದ್ದು, ಶೇಕಡ 8% ಡಿವಿಡೆಂಟ್ ನೀಡುವುದಾಗಿ ತಿಳಿಸಿದರು. 9% ಡಿವಿಡೆಂಟ್ ನೀಡುವ ಯೋಚನೆ ಇತ್ತು ಆದರೆ ಹೊಸ ಶಾಖೆ ಆರಂಭ ಮಾಡಿದ್ದರಿಂದ ಖರ್ಚು ವೆಚ್ಚ ಗಳು ಹೆಚ್ಚಾಗಿ ಅಂದುಕೊಂಡಂತೆ ಡಿವಿಡೆಂಟ್ ನೀಡಲು ಸಾಧ್ಯವಾಗಿಲ್ಲ ಮುಂದಿನ ದಿನದಲ್ಲಿ ಸದಸ್ಯರೆಲ್ಲರೂ ಬ್ಯಾಂಕಿನ ವ್ಯವಹಾರದಲ್ಲಿ ತೊಡಗಿಕೊಂಡು ಬಂಡವಾಳ ಹೆಚ್ಚು ಹರಿಸಿದಲ್ಲಿ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ವಾರ್ಷಿಕ ಲೆಕ್ಕಪತ್ರವನ್ನು ಮುಖ್ಯಕಾರ್ಯನಿರ್ವಹಣಾಧಿಕಾರಿ ಧನಂಜಯ ಕುಮಾರ್ ಮಂಡಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಕುಶಾಲಪ್ಪ ಗೌಡ ಪೂವಾಜೆ ನಿರ್ದೇಶಕರಾದ ಸೋಮೇ ಗೌಡ, ನಾರಾಯಣಗೌಡ ದೇವಸ್ಯ, ಜಯಾನಂದ ಗೌಡ,ಗೋಪಾಲಕೃಷ್ಣ ಗುಲ್ಲೋಡಿ, ಮಾಧವ ಗೌಡ, ಗೋಪಾಲಕೃಷ್ಣ ಜಿ. ಕೆ, ಸುರೇಶ್ ಕೌಡಂಗೆ, ಯಶವಂತ್ ಬನಂದೂರು, ಶ್ರೀಮತಿ ಉಷಾದೇವಿ ಕಿನ್ಯಾಜೆ,ಶ್ರೀಮತಿ ಭವಾನಿ ಗೌಡ, ಸುನಿಲ್ ಅನಾವು ಉಪಸ್ಥಿತರಿದ್ದರು.
ಉಪಾಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಸ್ವಾಗತಿಸಿ,ಸೋಮಂತಡ್ಕ ಶಾಖೆಯ ಉಮೇಶ್ ಗೌಡ ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ಜಯಾನಂದ ಗೌಡ ಧನ್ಯವಾದವಿತ್ತರು.