ಕಳಿಯ: ಇಲ್ಲಿಯ ನ್ಯಾಯತರ್ಪು ಹಾಗೂ ಕಳಿಯ ಗ್ರಾಮದ ಸಾಕು ನಾಯಿಗಳಿಗೆ ರೇಬೀಸ್ ಸಾಂಕ್ರಾಮಿಕ ರೋಗ ತಡೆಗಟ್ಟುವ ಉಚಿತವಾಗಿ ಲಸಿಕೆ ಸೆ.16ರಂದು ನಡೆಯಿತು.
ನ್ಯಾಯತರ್ಪು ಮತ್ತು ಕಳಿಯ ಗ್ರಾಮದ ಕೇಲ್ದಡ್ಕ, ವಂಜಾರೆ, ಮುದ್ದುಂಜ, ಹಾಕೋಟೆ, ಕಲಾಯಿತೊಟ್ಟು, ಕಜೆ , ಕೆಳಗಿನಬೆಟ್ಟು, ಬಟ್ಟೆಮಾರು ಹಾಗೂ ಪೆಲತ್ತಳಿಕೆ ವ್ಯಾಪ್ತಿಯಲ್ಲಿ ಕಳೆದ ಕೆಲದಿನಗಳ ಹಿಂದೆ ರೇಬೀಸ್ ಪೀಡಿತ ನಾಯಿಯೊಂದು ಸುಮಾರು 10 ಕ್ಕೂ ಹೆಚ್ಚಿನ ನಾಯಿಗಳು ಮತ್ತು ಓರ್ವ ಮಹಿಳೆಗೆ ಕಡಿತಕ್ಕೆ ಒಳಗಾಗಿದ್ದಾರೆ.ಮಹಿಳೆ ಅವರು ಈಗಾಗಲೇ ಮಂಗಳೂರು ಜಿಲ್ಲಾ ಆಸ್ಪತ್ರೆ ಯಲ್ಲಿ ಚುಚುಮದ್ದು ಪಡೆದುಕೊಂಡಿದ್ದಾರೆ.
ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಂಚಾಯತ್ ಸದಸ್ಯರ ಮನವಿಯಂತೆ ಬೆಳ್ತಂಗಡಿ ವೈದ್ಯಕೀಯ ಪರೀಕ್ಷಕರಾದ ಸಚಿನ್ ನೇತೃತ್ವದಲ್ಲಿ ಉಚಿತವಾಗಿ ಸುಮಾರು 90 ಹೆಚ್ಚು ಸಾಕು ನಾಯಿಗಳಿಗೆ ಲಸಿಕೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿವಾಕರ ಮೆದಿನ, ಸದಸ್ಯರಾದ ವಿಜಯ ಕುಮಾರ್ ಕಲಾಯಿತೊಟ್ಟು,ಮೋಹಿನಿ ಹಾಕೋಟೆ,ಪಂಚಾಯತು ಕಾರ್ಯದರ್ಶಿ ಕಂಞ್ಞ ಕೆ, ಸಿಬ್ಬಂದಿಗಳಾದ ರವಿ ಹೆಚ್, ಸುರೇಶ್ ಗೌಡ ಮತ್ತು ಆಟೊ ಚಾಲಕ ರಮೇಶ್ ಪೂಜಾರಿ ಉಪಸ್ಥಿತರಿದ್ದರು.