ಶಿಶಿಲ: ಇಲ್ಲಿಯ ಅಂಗನವಾಡಿ ಕೇಂದ್ರದಲ್ಲಿ ಪೋಷನ್ ಅಭಿಯಾನ ಏರ್ಪಡಿಸಿದ್ದರು.ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಧಿನ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ಕಾರ್ಯಕರ್ತೆ ಯಾದ ಶ್ರೀಮತಿ ಸುಜಾತ ರವರು ಮಕ್ಕಳಿಗೆ ಬಾಣಂತಿಯರಿಗೆ ಮತ್ತು ಗರ್ಭಿಣಿಯರಿಗೆ ಸಿಗಬೇಕಾದ ಅಗತ್ಯ ಪೋಷಕಾಂಶಗಳ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಬಾಲವಿಕಾಸ ಸಂಘದ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ, ಗೊಂಚಲಿನ ಅಧ್ಯಕ್ಷರಾದ ಶ್ರೀಮತಿ ಸುಗುಣ, ಗೊಂಚಲಿನ ಮಾಜಿ ಅಧ್ಯಕ್ಷರಾದ ಶ್ರೀಮತಿ ಜಾನಕಿ, ಆಶಾ ಕಾರ್ಯಕರ್ತೆಯಾದ ಶ್ರೀಮತಿ ರೂಪ, ಅಂಗನವಾಡಿ ಕಾರ್ಯಕರ್ತೆಯಾದ ಪದ್ಮಾವತಿ, ಅಂಗನವಾಡಿ ಸಹಾಯಕಿ ಶ್ರೀಮತಿ ವಿನಯ ಹಾಗೆ ಸಭೆಯಲ್ಲಿ ಗರ್ಭಿಣಿಯರು ಬಾಣಂತಿಯರು ಶ್ರೀ ಶಕ್ತಿ ಸಂಘದ ಸದಸ್ಯರು ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ನೆರೆದಿದ್ದ ಮಕ್ಕಳು ಹಾಗೂ ಹೇಮಾವತಿ ಬಿ ರವರು ಧನ್ಯವಾದವಿತ್ತರು.
p>