ಸಶಸ್ತ್ರ ಸೀಮಾ ಬಲ ಕೇಂದ್ರ ಪೊಲೀಸ್ ಹುದ್ದೆಗೆ ಆಯ್ಕೆಯಾದ ಗುರಿಪಳ್ಳದ ಅರ್ಚನಾ ಗೌಡ

0

ಗುರಿಪಳ್ಳ: ಸಶಸ್ತ್ರ ಸೀಮಾ ಬಲ ಕೇಂದ್ರ ಪೊಲೀಸ್ ಹುದ್ದೆಗೆ ಉಜಿರೆ ಗ್ರಾಮದ ಗುರಿಪಳ್ಳದ ಕೊಡ್ಡೋಲು ನಿವಾಸಿಯಾಗಿರುವ ಸದಾಶಿವ ಗೌಡ ಇವರ ಪುತ್ರಿ ಅರ್ಚನಾ ಗೌಡ ಆಯ್ಕೆಯಾಗಿರುತ್ತಾರೆ.

ಪ್ರಸ್ತುತ ಇವರು ಲಕ್ನೋದಲ್ಲಿ ನಡೆಯಲಿರುವ ತರಬೇತಿಯಲ್ಲಿ ಭಾಗವಹಿಸಿದ ನಂತರ ರಾಜಾಸ್ಥಾನದ ಅಲ್ವರ್ ಗೆ ನೇಮಕಾತಿ ಹೊಂದಲಿದ್ದಾರೆ.

ಇವರು ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಪದವಿ ವ್ಯಾಸಾಂಗ ಪೂರೈಸಿದ್ದು, ಹದಿಮೂರು ಬಾರಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದು, ಎರಡು ಬಾರಿ ನಾಯಕರಾಗಿ ಆಯ್ಕೆಯಾಗಿದ್ದರು.ಪ್ರಸಕ್ತ ಕರ್ನಾಟಕದ ಟಾಪ್ ರೈಡರ್ ಆಗಿರುತ್ತಾರೆ.

LEAVE A REPLY

Please enter your comment!
Please enter your name here