ಬೆಳ್ತಂಗಡಿ ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಿಚಾರಗೋಷ್ಠಿ ಮತ್ತು ವಿಜ್ಞಾನ ನಾಟಕ ಸ್ಪರ್ಧೆ

0

ಬೆಳ್ತಂಗಡಿ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ ರಝಾ ಗಾರ್ಡನ್ ಮಂಜೊಟ್ಟಿ ಇಲ್ಲಿ 2023-24 ನೇ ವಿದ್ಯಾರ್ಥಿಗಳ ಬೆಳ್ತಂಗಡಿ ತಾಲೂಕು ಮಟ್ಟದ ವಿಜ್ಞಾನ ವಿಚಾರಗೋಷ್ಠಿ ಮತ್ತು ವಿಜ್ಞಾನ ನಾಟಕ ಸ್ಪರ್ಧೆಯು ಬೆಳ್ತಂಗಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇವರ ಸಹಭಾಗಿತ್ವದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಎಚ್.ಎಸ್ ವಿರೂಪಾಕ್ಷ ಇವರು ನೆರವೇರಿಸಿ ಮಾತನಾಡಿ ನಂಬಿಕೆಗಳು ಎಷ್ಟು ನಿಜವೋ ಹಾಗೆಯೇ ವಿಜ್ಞಾನ ಕೂಡ ಅಷ್ಟೇ ಸತ್ಯ.ವಿದ್ಯಾರ್ಥಿಗಳು ವಿಜ್ಞಾನದ ಕಡೆಗೆ ಹೆಚ್ಚಿನ ಗಮನ ನೀಡಿ ವಿವಿಧ ಸಂಶೋಧನೆಗಳನ್ನು ಮಾಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಟಾರ್ ಲೈನ್ ವಿದ್ಯಾಸಂಸ್ಥೆಯ ಸಂಚಾಲಕರಾದ ಶ್ರೀಯುತ ಜನಾಬ್ ಸೈಯದ್ ಹಬೀಬ್ ವಹಿಸಿಕೊಂಡಿದ್ದರು.ವೇದಿಕೆಯಲ್ಲಿ ಶಿಕ್ಷಣ ಸಂಯೋಜಕರು / ವಿಜ್ಞಾನ ಸ್ಪರ್ಧೆಗಳ ನಾಡೆಲ್ ಆಗಿರುವ ಸಿದ್ದಲಿಂಗ ಸ್ವಾಮಿ ಡಿ.ಎಸ್, ಬೆಳ್ತಂಗಡಿ ವಲಯ ಶಿಕ್ಷಣ ಸಂಯೋಜಕಿ ಚೇತನಾಕ್ಷಿ.ಎಂ, ಬಂಗಾಡಿ ವಲಯ ಶಿಕ್ಷಣ ಸಂಯೋಜಕರಾದ ರಮೇಶ್.ಎಂ, ತಾಲೂಕು ವಿಜ್ಞಾನ ವಿಷಯ ವೇದಿಕೆ ಇದರ ಅಧ್ಯಕ್ಷರು ಹಾಗೂ ತಾಲೂಕು ಪ್ರಾಥಮಿಕ ಸಹ ಶಿಕ್ಷಕ ಸಂಘದ ಅಧ್ಯಕ್ಷರಾಗಿರುವ ರಾಧಾಕೃಷ್ಣ.ಟಿ, ಸಮನ್ವಯಾಧಿಕಾರಿಯಾದ ಮೋಹನ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ವಿಜ್ಞಾನ ವಿಷಯ ಸ್ಪರ್ಧೆಗಳ ತೀರ್ಪುಗಾರರಾದ ನಿರಂಜನ್, ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಯಾದ ಸೈಯದ್ ಆಯ್ಯುಬ್ ಹಾಗೂ ಶಾಲಾ ಮುಖ್ಯೋಪಾಧ್ಯಾಯನಿ ಜಾಕಿನ್ ಬಿನ್ ಇವರು ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯನಿ ಜಾಕಿನ್ ಬಿನ್ ತಮ್ಮ ಪ್ರಾಸ್ತಾವಿಕ ಮಾತುಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಬೆಳ್ತಂಗಡಿ ವಲಯ ಶಿಕ್ಷಣ ಸಂಯೋಜಕಿ ಚೇತನಾಕ್ಷಿ ಇವರು ಧನ್ಯವಾದ ಕಾರ್ಯಕ್ರಮವನ್ನು ನೆರವೇರಿಸಿದರು.

ಶಾಲಾ ಸಹ ಶಿಕ್ಷಕಿ ಯಶಸ್ವಿನಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.ತಾಲೂಕಿನ ವಿವಿಧ ಪ್ರೌಢಶಾಲೆಗಳಿಂದ ಬಂದಿರುವ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಚಾರಾಗೋಷ್ಠಿ ಸ್ಪರ್ಧೆ ಮತ್ತು ವಿಜ್ಞಾನ ನಾಟಕ ಸ್ಪರ್ಧೆಗಳು ನಡೆದವು.

p>

LEAVE A REPLY

Please enter your comment!
Please enter your name here